ರಾಜ್ಯ

ಖರ್ಗೆ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಹತ್ತಕ್ಕೂ ಹೆಚ್ಚು ಜನರ ಬಂಧನ

ಕಲುಬುರಗಿ : ಜುಲೈ 4ರಂದು ಅಕ್ಬರ್ ಮನೆಗೆ ಬೆಂಕಿ ಹಚ್ಚಿದ್ದರಿಂದ ನಾಲ್ವರು ಗಾಯಗೊಂಡಿದ್ದರು. ಅದರಲ್ಲಿ ಯಾಶೀನ್ ಸಾವನ್ನಪ್ಪಿದ್ದರು. ಹೀಗಾಗಿ ಅಕ್ಬರ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿ ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾದ ಹತ್ತಕ್ಕೂ ಹೆಚ್ಚು ಜನರನ್ನು ಬಂಧಿಸಿದ ಘಟನೆ ಕಲಬರುಗಿಯಲ್ಲಿ ನಡೆದಿದೆ.

ನಗರದ ಐವಾನ್ ಶಾಹಿ ಬಡಾವಣೆಯಲ್ಲಿರುವ ಕಾಂಗ್ರೆಸ್ ಸಂಸದೀಯ ನಾಯಕಮಲ್ಲಿಕಾರ್ಜುನ ಖರ್ಗೆ ಮನೆ ಮುಂದೆ ಪ್ರತಿಭಟನೆ ನಡೆಸಲು ಯತ್ನಿಸಿದ್ದರು. ಹೀಗಾಗಿ ಸ್ಟೇಶನ್ ಬಜಾರ ಪೊಲೀಸರು ಅವರನ್ನು ಮುಂಜಾಗ್ರತ ಕ್ರಮವಾಗಿ ಬಂಧಿಸಿ, ಆನಂತರ ಬಿಡುಗಡೆಗೊಳಿಸಿದರು.

ಯಾಶೀನ್ ಸೋಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ. ಈ ಬೆಂಕಿ ಪ್ರಕರಣಕ್ಕೆ ಸಂಬಂಧೀಸಿದಂತೆ ಕಲಬುರಗಿಯ ಸೈಯದ್ ಯಾಶೀನ್ ಕುಟುಂಬಸ್ಥರು ನ್ಯಾಯ ಒದಗಿಸುವಂತೆ ಕೋರಿದ್ದರು.

ಈಗಾಗಲೇ ಬೆಂಕಿ ಹಚ್ಚಿದ್ದ ಮುಸ್ತಫಾ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಜೊತೆಗೆ ಪ್ರಮುಖ ಆರೋಪಿ ಬಂಧನ ಮಾಡಬೇಕು ಎಂಬುದು ಯಾಶೀನ್ ಕುಟುಂಬಸ್ಥರ ಬೇಡಿಕೆಯಾಗಿದೆ.

Please follow and like us:

Leave a Reply

Your email address will not be published. Required fields are marked *