ರಾಷ್ಟ್ರೀಯ

ಮೋದಿ ಸರಕಾರಕ್ಕೆ ಕೌಂಟ್ ಡೌನ್ ಶುರು ಆಗಿದೆ ಎಂದ ಸೋನಿಯಾಗಾಂಧಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ವಿರುದ್ಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ನವದೆಹಲಿಯಲ್ಲಿ ನಡೆದ ಎಐಸಿಸಿ ಕಾರ್ಯಕಾರಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿ ಸರಕಾರಕ್ಕೆ ಕೌಂಟ್ ಡೌನ್ ಆರಂಭವಾಗಿದೆ ಎಂದು ಎಚ್ಚರಿಸಿದರು.

ಬರುವ ದಿನಗಳಲ್ಲಿ ಅವರಿಗೆ ಸೋಲು ಖಚಿತ. ಮೋದಿ ಸರಕಾರ ಭಾರೀ ಅಹಂದಿಂದ ಮೆರೆಯುತ್ತಿದೆ. ಅದನ್ನು ಶತಾಯಗತಾಯ ನಾವು ಕಟ್ಟಿಹಾಕಲೇಬೇಕಿದೆ ಎಂದು ಕರೆ ನೀಡಿದರು.

ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ್ಷ ಪಕ್ಷಗಳ ಜೊತೆಗೆ ಮೈತ್ರಿ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ದೇಶದ ರಾಜಕೀಯ ಸ್ಥೀತಿಗತಿ, ಕಾಂಗ್ರೆಸ್ ಬಲವರ್ಧನೆ ಕುರಿತು ಪ್ರಮುಖ ಚರ್ಚೆ ನಡೆದಿವೆ.

ಬಳಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾವು ಭಾರತದ ಧ್ವನಿಯಾಗಿ ಕಾರ್ಯನಿರ್ವಹಿಸುವಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಘಟಕಗಳು ಸಜ್ಜಾಗಬೇಕು ಎಂದು ಕರೆ ನೀಡಿದರು.

ಈ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಂಸದೀಯ ನಾಯಕ ಮಲ್ಲಿಕಾರ್ಜುನಖರ್ಗೆ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಸಿಎಂಸಿದ್ದರಾಮಯ್ಯ, ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಸೇರಿದಂತೆಅನೇಕರು ಪಾಲ್ಗೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *