ಉಡುಪಿ : ಉಡುಪಿಯ ಅಷ್ಟಮಠಗಳ ಪೈಕಿ ಒಂದಾಗಿರುವ ಶಿರೂರ ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಅನುಮಾನಸ್ಪದ ಸಾವು ದಿನಕ್ಕೊಂದು ತಿರುವು ಪಡೆಯುತ್ತಿದೆ.
ಈಗಾಗಲೇ ಮಠವನ್ನು ತಪಾಸಣೆ ನಡೆಸಿದ ಪೊಲೀಸರು ಅನೇಕ ಮಹತ್ತರ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಅಲ್ಲದೆ, ಸ್ವಾಮೀಜಿಯ ಜೊತೆಗೆ ಮಠದಲ್ಲೇ ತಂಗುತ್ತಿದ್ದಜಗದೀಶ ಎಂಬುವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ನಿನ್ನೇಯಷ್ಟೇ ಸ್ವಾಮೀಜಿಯ ಜೊತೆಗೆ ಒಳ್ಳೇಯ ಬಾಂಧವ್ಯ ಹೊಂದಿದ್ದ ರಮ್ಯಾಶೆಟ್ಟಿಯವರನ್ನು ಕೂಡ ವಿಚಾರಣೆ ನಡೆಸಿತ್ತು.
ಅದೇ ರೀತಿ ಜಗದೀಶ ಪೂಜಾರಿ ಕೂಡ ಸ್ವಾಮೀಜಿಯ ಜೊತೆಗೆ ಬಾಲ್ಯದಿಂದ ಒಡನಾಟ ಹೊಂದಿದ್ದ.ಈ ಜಗದೀಶ ಎಂಬಾತ ಶ್ರೀಗಳಿಗೆ ಮದ್ಯ ಹಾಗೂ ರಮ್ಯಶೆಟ್ಟಿಯನ್ನು ಪರಿಚಯಿಸಿದ್ದ ಎನ್ನಲಾಗಿದೆ.
ಒಟ್ಟಿನಲ್ಲಿ ಸ್ವಾಮೀಜಿಯ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ವಿಚಾರಣೆಯ ನಂತರವಷ್ಟೇ ಸತ್ಯಾಂಶ ಹೊರಬರಲಿದೆ.