ಉಡುಪಿ : ಉಡುಪಿಯ ಅಷ್ಟ ಮಠಗಳ ಪೈಕಿ ಒಂದಾಗಿರುವ ಶಿರೂರ ಮಠಾಧೀಶರಾದ ಲಕ್ಷ್ಮೀವರ ತೀರ್ಥ ಶ್ರೀಗಳು ಜುಲೈ 16ರಂದು ಸೋಮವಾರ ಕೊನೆಯದಾಗಿ ಮಾಧ್ಯಮಗಳ ಜೊತೆಗೆ ಮನಬಿಚ್ಚಿ ಮಾತನಾಡಿದ್ದರು.
ಆ ಸಂದರ್ಭದಲ್ಲಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದರು. ಪಟ್ಟದ ದೇವರು ನನ್ನ ಸ್ವತ್ತು. ಅದು ನಾನು ಕದ್ದುದಲ್ಲ. ಸ್ವಂತದು, ಹಿಂದಿನಿಂದ ಬಂದ ಪರಂಪರೆ, ಮುಂದೆ ನಡೆಸಿಕೊಂಡು ಹೋಗಬೇಕಿದೆ. ವಿಠ್ಠಲ ದೇವರ ಮೂರ್ತಿ ವಾಪಾಸು ಕೊಡಲು ಅದುಮಾರು ಮಠ ಪೀಡಿಸುತ್ತಿದೆ. ಇದು ಸರಿಯಾದುದ್ದಲ್ಲ.
ಪುತ್ತಿಗೆ ಮಠ ಬಿಟ್ಟು ಉಳಿದ ಆರು ಮಠಗಳ ವಿರುದ್ಧ ಕ್ರಿಮಿನಲ್ ದಾವೆ ಹೂಡಿ ಪಟ್ಟದ ದೇವರನ್ನು ಪಡೆದೆ ತೀರುತ್ತೇನೆ. ಇದರಲ್ಲಿ ಎರಡು ಮಾತಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಅವರ ಈ ಕೊನೆಯ ಆಡಿಯೋ ಕ್ಲಿಪ್ ಇದೀಗ ಭಕ್ತರ ಮೊಬೈಲ್ ನಲ್ಲಿ ಹರಿದಾಡುತ್ತಿದೆ.
ಹುಬ್ಭಳ್ಳಿ : 1996ರಿಂದ ಇಂದಿನವರೆಗೆ ಸತತ 22 ವರ್ಷಗಳಿಂದ ಈ ಧಾರವಾಡ ಜಿಲ್ಲೆಯನ್ನಾಳಿದ ಈ ಎರಡು ಬಿಜೆಪಿ ಸಂಸದರ ಕಾಣಿಕೆ ಏನು ಹುಬ್ಬಳ್ಳಿ-ಧಾರವಾಡಕ್ಕೆ ಎಂದು ಶ್ರೀಸಾಮಾನ್ಯರ ವೇದಿಕೆ ಜೆಡಿಎಸ್ ಪ್ರಶ್ನಿಸಿದೆ. ಇಬ್ಬರು ಸಂಸದರ ಭಾವಚಿತ್ರ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಇದರೊಂದಿಗೆ ಬರಗೆಟ್ಟ ಸುದ್ದಿ ಮಾಧ್ಯಮಗಳೇ ಯಾವುದಾದ್ರು ರಾಜಕಾರಣಿ ಪತ್ರಿಕಾಗೋಷ್ಠಿ ಕರೆದರೂ ತಾವು ಅಲ್ಲಿ ಸುದ್ಧಿಗಿಂತ ಹೆಚ್ಚು ಹಾಕುವ ಏಂಜಲು ತಿನ್ನೋಕ್ಕೆ ಹೋಗೋದು ಅಂತ ನಿಮಗೂ ಗೊತ್ತು ನಮಗೂ ಗೊತ್ತು.. ಈ ನಾಟಕ ಸಾಕು ಮಾಡಿ ರಾಜ್ಯದ […]
ಧಾರವಾಡ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಚಾರ್ಯರ ಶಾಲಾ ಭೇಟಿ ಕಡ್ಡಾಯವಾಗಿದ್ದು, ತಿಂಗಳಲ್ಲಿ ಕನಿಷ್ಠ 10 ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಬೋಧನೆ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೂಚಿಸಿದರು. ಅವರು ಸೋಮವಾರ ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಹಾಗೂ ನಿರ್ವಹಣಾ ಸಂಸ್ಥೆ (ಸಿಸ್ಲೆಪ್) ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಡಯಟ್ […]
ಬೆಂಗಳೂರು : ಯಾರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಬಾರದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮನವಿ ಮಾಡಿದ್ದಾರೆ. ಅವರು ಗುರುವಾರ ಬೆಂಗಳೂರಿನಲ್ಲಿ ಕಾರ್ಗಿಲ್ ವಿಜಯೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಿಜವಾಗಿಯೂ ಪ್ರತ್ಯೇಕ ರಾಜ್ಯದ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಅವರು ಕೂಡಲೇ ಬಂದ್ ಕೈ ಬಿಡಬೇಕು. ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು. ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ. ನಮ್ಮ ಹಿಂದಿನ ಸರಕಾರದಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಮಾಡಲಾಗಿದೆ. 114 ತಾಲೂಕಿಗೆ ಹೆಚ್ಚಿನಅನುದಾನ ನೀಡಲಾಗಿದೆ ಎಂದರು. ಮುಖ್ಯಮಂತ್ರಿ […]