ಧಾರವಾಡ : ‘ಅನ್ನ ದಾಸೋಹ ಅಷ್ಟೇ ಇದ್ದರೆ ಮಾತ್ರ ಒಂದು ಮಠ ಪರಿಪೂರ್ಣವಾಗಲ್ಲ. ಅನ್ನ ದಾಸೋಹದ ಜೊತೆ ಅಲ್ಲಿ ಜ್ಞಾನ ದಾಸೋಹವೂ ಸಿಗಬೇಕು. ಇಂತಹ ಮಹತ್ ಕಾರ್ಯವನ್ನು ಮಾಡಿದ್ದು ಧಾರವಾಡ ಮುರುಘಾಮಠ’ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದ ಸ್ವಾಮೀಜಿ ಕೊಂಡಾಡಿದರು.
ಅವರು ನಗರದ ಮುರುಘಾಮಠದಲ್ಲಿ ಜರುಗಿದ ಶ್ರೀ ಮುರುಘರಾಜೇಂದ್ರ ಪ್ರಸಾದ ನಿಲಯದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
‘ಇಂದು ಪುಸ್ತಕಗಳು ಶೋಕೇಸಿನ ಅಲಂಕಾರಗಳಾಗಿ ಮಾತ್ರ ಢಾಣಿಸುತ್ತಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಪುಸ್ತಕ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ. ಗ್ರಂಥಗಳನ್ನು ಓದುವ ಮೂಲಕ ಅಂತರ್ಯದ ಜ್ಞಾನವನ್ನು ಉದ್ದೀಪನಗೊಳಿಸುವ ಕೆಲಸ ಮಾಡಬೇಕು. ಮುರುಘಾಮಠ ಏಕಕಾಲದಲ್ಲಿ 111 ಪುಸ್ತಕಗಳನ್ನು ಬಿಡುಗಡೆ ಮಾಡಿರುವ ಕಾರ್ಯ ಹೆಮ್ಮೆ ಪಡುವಂತದ್ದು ಎಂದರು.
ಸಿರಿಗೇರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಒಬ್ಬ ರಾಜಕಾರಣಿ ಮುಂದಿನ ಚುನಾವಣೆ ಬಗ್ಗೆ ವಿಚಾರ ಮಾಡಿದರೇ, ಒಬ್ಬ ಮಹಾತ್ಮ ಮುಂದಿನ ಪೀಳಿಗೆಯ ಕುರಿತು ಚಿಂತಿಸುತ್ತಾನೆ. ಇಂತಹ ಕೆಲಸ ಮಾಡಿದವರು ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳು ಎಂದು ಶ್ಲಾಘಿಸಿದರು.
ಮುರುಘಾಮಠದಲ್ಲಿ ಇಂದು ಹಲವಾರು ಸಾಧಕರಿಗೆ, ಸೇವೆಗೈದವರಿಗೆ ಸನ್ಮಾನ ಸಿಗುತ್ತಿದೆ. ಆದರೆ, ಮೃತ್ಯುಂಜಯ ಅಪ್ಪಗಳಿಗೆ ಈ ಸನ್ಮಾನ ಸಿಕ್ಕಿರಲಿಲ್ಲ. ಅವರನ್ನು ನೋಡುವ ಸೌಭಾಗ್ಯ ನನಗೆ ಸಿಗದಿರುವುದಕ್ಕೆ ವಿಷಾದವಾಗುತ್ತೆ ಎಂದು ಶ್ರೀಗಳನ್ನು ನೆನೆದು ಕೆಲಕಾಲ ಭಾವುಕರಾದರು.
ನಾಡೋಜ ಚೆನ್ನವೀರ ಕಣವಿ ಮಾತನಾಡಿ, 1941ರಲ್ಲಿ ನಾನು ಮಠದಲ್ಲಿ ಅಭ್ಯಾಸ ಮಾಡಿದ್ದೆನೆ. ಶ್ರೀಮಠದ ನೀಡಿದ ಸಂಸ್ಕೃತಿ ನನ್ನ ಬೆಳವಣಿಗೆಗೆ ಸಹಾಯವಾಯಿತು. ಮುರುಘಾಮಠದ ಪರಂಪರೆ ನಾಡಿಗೆ ಮಾದರಿಯಾಗಿದೆ ಎಂದು ಪ್ರಸಾದ ನಿಲಯದಲ್ಲಿ ತಾವು ಕಳೆದ ದಿನಗಳನ್ನು ಸ್ಮರಿಸಿದರು.
ಸಾಹಿತಿ ಗುರುಲಿಂಗ ಕಾಪಸೆ ಮಾತನಾಡಿ, ಉತ್ತರ ಕರ್ನಾಟಕದ ಭಾಗದಲ್ಲಿ ಮೃತ್ಯುಂಜಯ ಸ್ವಾಮಿಗಳು ಪ್ರಸಾದ ನಿಲಯ ಆರಂಭಿಸಿ ಬಡ ಜನರಿಗೆ ರಕ್ಷಣೆ ನೀಡಿದರು. ಅವರಿಗೆ ಸಂಗೀತದಲ್ಲಿ ಅಪಾರ ಆಸಕ್ತಿ ಇತ್ತು. ಹೊಸ ಜನಾಂಗಕ್ಕೆ ಮುರುಘಾಮಠ ವಿಶೇಷ ಕೊಡುಗೆ ನೀಡಿದೆ ಎಂದರು.
ಇದೇವೇಳೆ ಹಿರಿಯ ಸಾಹಿತಿಗಳಾದ ನಾಡೋಜ ಡಾ. ಚೆನ್ನವೀರ ಕಣವಿ, ಗುರುಲಿಂಗ ಕಾಪಸೆ, ಆದಿಚುಂಚನಗಿರಿ ಕ್ಷೇತ್ರದ ಕಾರ್ಯದರ್ಶಿ ಡಾ. ಜೆ.ಎನ್. ರಾಮಕೃಷ್ಣೇಗೌಡ, ಚಿತ್ರದುರ್ಗ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ.ವಸ್ತ್ರದಮಠ, ನಿವೃತ್ತ ಐಎಎಎಸ್ ಅಧಿಕಾರಿ ಬಿ.ವಿ.ಕಟ್ಟಿ, ಜಿ.ವಿ.ಕೊಂಗವಾಡ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಚನಾಂತರಂಗ, ಶರಣರ ಸತ್ಸಂಗದಲ್ಲಿ, ಶಿವಶರಣೆಯರ ವಚನಗಳು, ಹೇಮಗಲ್ಲ ಹಂಪನ ಷಟ್‍ಸ್ಥಲ ವಚನಗಳು, ಮಹಾಲಿಂಗದೇವನ ಸೂಕ್ಷ್ಮ ಮಿಶ್ರ ಷಟ್‍ಸ್ಥಲ ವಚನಗಳು, ವಚನಾಮೃತ, ಬಸವಯುಗದ ಸ್ವರವಚನಗಳು, ಗುರುಬಸವಾರ್ಯ ಕೈವಲ್ಯ ಪದ್ಧತಿ, ಮುಧ್ವೀರಸ್ವಾಮಿಯ ಸ್ವರವಚನಗಳು ಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಯಿತು.
ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಶ್ರೀಗಳು, ವಿನಯ ಕುಲಕರ್ಣಿ ವೀರಣ್ಣ ಮತ್ತಿಕಟ್ಟಿ, ವೀರಣ್ಣ ಅಥಣಿ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ.ಲಕಮನಹಳ್ಳಿ, ಶಿವಾನಂದ ಶೆಟ್ಟೆಣ್ಣವರ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ : ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ವಿದೇಶ ಪ್ರವಾಸದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಅವರು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅತೃಪ್ತ ಕೈ ಶಾಸಕರ ಒತ್ತಡದಿಂದಾಗಿ ವಿಳಂಬವಾಗುತ್ತಿದೆ. ಸಚಿವ ಸಂಪುಟದ ವಿಸ್ತರಣೆಗೆ ಬಹಳ ಒತ್ತಡ ಇದೆ. ಶಾಸಕರು ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ ಎಂದರು. ಈ ಬಾರಿ ಅವಕಾಶ ವಂಚಿತ ಜಿಲ್ಲೆ ಹಾಗೂ ವರ್ಗಗಳಿಗೆ ನ್ಯಾಯ ಸಿಗಲಿದೆ ಎಂದ ಅವರು […]
ಕೊಡಗು : ಕೊಡಗಿನಲ್ಲಿ ನೆರವು ನೀಡುವ ಕಾರ್ಯ ಗುರುವಾರವೂ ಮುಂದುವರೆದಿದೆ. ಸಾವಿರಾರು ಜನ ಸಾಲು ಸಾಲು ನಿಂತು ಪಡಿತರ ಪಡೆಯಲು ಗಂಟೆಗಟ್ಟಲೇ ಕಾದು ನಿಂತಿದ್ದಾರೆ. ಮಡಿಕೇರಿ ನಗರಸಭೆ ಸಿಬ್ಬಂದಿ ಅಗತ್ಯ ಸಾಮಾಗ್ರಿ ವಿತರಣೆ ಭರದಿಂದ ಸಾಗಿದೆ. ವಯೋವೃದ್ಧರು, ಕೂಲಿ ಕಾರ್ಮಿಕರು, ಚಿಕ್ಕಮಕ್ಕಳನ್ನು ಕರೆದುಕೊಂಡು ತಾಯಿಂದಿರು ಕೂಡ ಬಂದು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ವಿತರಣೆ ಆರಂಭಗೊಂಡಿದ್ದು, ಅಕ್ಕಿ, ಹಾಲು, ನೀರು ಸೇರಿದಂತೆ ಅನೇಕ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ. ರಾಜ್ಯದ ಹಲವಡೆಯಿಂದ ಬಂದ ಪರಿಹಾರ ಸಾಮಾಗ್ರಿ ವಿತರಣೆ […]
ಬೆಳಗಾವಿ : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಸಾಗರ ಲಾಖೆಗೆ ಸಿ ಐ ಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಪರಶುರಾಮ್ ವಾಘ್ಮೋರೆ ಬಂದೂಕು ತರಬೇತಿ ವೇಳೆ ಆತನಿಗೆ ನೆರವು ಹಾಗೂ ಸಿಮ್ ಕೊಡಿಸಿದ್ದ ಆರೋಪದ ಹಿನ್ನಲೆಯಲ್ಲಿ ಈ ನೋಟಿಸ್ ನೀಡಲಾಗಿದೆ. ಈಗಾಗಲೇ ಎಸ್ ಐ ಟಿ ವಶದಲ್ಲಿರುವ ಭರತ ಕುರನೆ ಜೊತೆಗೆ ಈ ಸಾಗರ ಲಾಖೆ ನಿಕಟ ಸಂಪರ್ಕ ದಲ್ಲಿದ್ದ. ಇತ ಕೂಡ ಪರಶುರಾಮನೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಬೆಳಗಾವಿಯಲ್ಲಿ ಮೊಬೈಲ್ […]