ರಾಜ್ಯ

ರಾಜಭವನದ ಬಳಿಯೇ ಪೊಲೀಸ್ ಭದ್ರತಾ ಲೋಪ !?

ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ರಾಜಭವನ ಬಳಿಯೇ ಎರಡು ಪೊಲೀಸ್ ಭದ್ರತಾ ಲೋಪಗಳಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಇದು ಪೊಲೀಸರ ಕಾರ್ಯವೈಖರಿಗೆ ಹಾಗೂ ಅವರು ನೀಡುವ ಭದ್ರತೆಯನ್ನೇ ಅಣಕಿಸುವಂತೆ ಮಾಡಿದೆ. ಕಳೆದ ವಾರ ಈ ಘಟನೆ ನಡೆದಿದ್ದು. ರಾಜಭವನಕ್ಕೆ ಕುಡಿದ ಅಮಲಿನಲ್ಲಿ ಬೈಕ್ ಸವಾರನೊಬ್ಬ ನುಗ್ಗಲು ಯತ್ನ ಮಾಡಿದ ಘಟನೆ ಪೊಲೀಸ್ ಭದ್ರತಾ ಲೋಪ ಎಷ್ಟರಮಟ್ಟಿಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.

ಇನ್ನೂ ಇದೇ ವೇಳೆ ರಾಜಭವನದ ಪಕ್ಕದಲ್ಲಿರುವ ಪ್ರಸಾರ ಭಾರತಿ ಕೇಂದ್ರದ ಒಳಗೆ ಇರುವ ಗಂಧದ ಮರ ಕಡಿಯಲಾಗಿದೆ ಈ ಕುರಿತು ಪ್ರಸಾರ ಭಾರತಿ ನಿರ್ದೇಶಕ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ. ರಾಜಭವನದ ಪರಿಸ್ಥಿತಿಯೇ ಹೀಗಾದರೆ ರಾಜ್ಯದ ಪರಿಸ್ಥೀತಿ ಏನೂ, ಎತ್ತ ಎಂಬುದು ಕೂಡ ಜನಸಾಮಾನ್ಯರ ಪ್ರಶ್ನೆಯಾಗಿದೆ.

Please follow and like us:

Leave a Reply

Your email address will not be published. Required fields are marked *