ರಾಜ್ಯ

ಹತ್ತು ಶಾಸಕರನ್ನು ಸೆಳೆಯಲು ಬಿಜೆಪಿ ಪರದಾಟ

ಬೆಂಗಳೂರು : ರಾಜ್ಯದ ಸಮ್ಮೀಶ್ರ ಸರಕಾರವನ್ನು ಶತಾಯ ಗತಾಯ ಬೀಳಿಸಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ರಾಜ್ಯ ಬಿಜೆಪಿ ನಾಯಕರು ಹತ್ತಕ್ಕೂ ಹೆಚ್ಚು ಶಾಸಕರನ್ನು ಸೆಳೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸದ್ಯದ ಮಾಹಿತಿ ಪ್ರಕಾರ ಕೇವಲ ಐದಾರು ಶಾಸಕರು ಮಾತ್ರ ಬಿಜೆಪಿ ಸಂಪರ್ಕಕ್ಕೆ ಸಿಕ್ಕಿದಿದ್ದಾರೆ. ಕಂಪ್ಲಿ ಶಾಸಕ ಜೆ.ಎನ್. ಗಣೇಶ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಚಿಂಚೋಳಿ ಶಾಸಕ ಉಮೇಶ್ ಜಾಧವ, ಸೇರಿ ಐದು ಶಾಸಕರು ಮಾತ್ರ ರಾಜೀನಾಮೆಗೆ ಸಿದ್ದವಾಗಿದ್ದಾರೆ.

ಅವರು ಕಾನೂನುಪಂಡಿತರ ಸಲಹೆ ಕೂಡ ಪಡೆಯುತ್ತಿದ್ದಾರೆ. ರಾಜೀನಾಮೆ ಬಳಿಕ ಮುಂದಿನ ಕಾನೂನು ತೊಡುಕು ಬಗ್ಗೆ ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಕೂಡ ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಜೊತೆಗೂಡಿ ಆಪರೇಶನ ಕಮಲಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ನ ಇಬ್ಬರು, ಕಾಂಗ್ರೆಸ್ ನ ಹತ್ತು ಹಾಗೂ ಇಬ್ಬರು ಪಕ್ಷೇತರ ಶಾಸಕರು ಸೇರಿ ಹದಿನಾಲ್ಕು ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ಹರಸಾಹಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಾರೆ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮೀಶ್ರ ಸರಕಾರ ಬೀಳಿಸಲು ಅಗತ್ಯವಿರುವ ಶಾಸಕರ ಸಂಖ್ಯಾಬಲದ ಆಧಾರ ಮೇಲೆ ಸರಕಾರ ಪತನವಾಗುತ್ತಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ. ಅಲ್ಲಿಯವರೆಗೆ ಈ ನಂಬರಗೇಮ್ ಹೀಗೆಯೇ ಮುಂದುವರೆಯಲಿದೆ.

Please follow and like us:

Leave a Reply

Your email address will not be published. Required fields are marked *