ಬೆಳಗಾವಿ: ಅಳಿವಿನಂಚಿನಲ್ಲಿರುವ ಗೂಬೆಗಳನ್ನು ಅಕ್ರಮವಾಗಿ ಮನೆಯಲ್ಲಿ ಸಾಕುತ್ತಿದ್ದ ವ್ಯಕ್ತಿಯನ್ನು ಬೆಳಗಾವಿ ಅರಣ್ಯ ಜಾಗೃತ ದಳ(Forest squad) ಗುರುವಾರ ಬಂಧಿಸಿದೆ.
ಈ ಗೂಬೆಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದ್ದು, strigidae ತಳಿಗೆ ಸೇರಿದ Brown fish owl ಇದು ಶೆಡ್ಯೂಲ್ 4ರ ನಿಶಾಚರ ಪಕ್ಷಿಯಾಗಿದೆ ಎಂದು ಅರಣ್ಯ ಸಂಚಾರಿ ದಳದ ಡಿಸಿಎಫ್ ಎಸ್. ಬಾಲಕೃಷ್ಣ ಅವರು ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಮೀರಾಮಾ ಅರಳಿಕಟ್ಟಿ(೧೯) ಎಂದು ಗುರುತಿಸಲಾಗಿದ್ದು, ಈತ ಗೋಕಾಕ ತಾಲೂಕಿನ ಕುಂದರಗಿ ಗ್ರಾಮದವನಾಗಿದ್ದು, ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ಮಾಡಲಾಗಿದ್ದು, ಮುಖ್ಯ ಆರೋಪಿ ಎನ್ನಲಾದ ರಾಯಭಾಗ ತಾಲೂಕು ಹಾರೂಗೆರೆಯ ಅನಿಲ ಗಡ್ಡಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಈ ಕಾರ್ಯಾಚರಣೆಯಲ್ಲಿ RFI ಬಿ. ವಿ. ಉಳವನ್ನವರ ಹಾಗೂ DRFO ಆರ್. ವಿ. ಮುರಾರಿ, ಎಸ್. ಎಂ. ನಾಯಿಕ, ಎನ್. ಎ. ನಿರ್ವಾಣಿ ಹಾಗೂ ಗಾರ್ಡಗಳಾದ ಮಹಾಂತೇಷ ಹಿಪ್ಪರಗಿ, ಗಿರೀಶ ಬನ್ನದ ಸೇರಿದಂತೆ ಇನ್ನಿತರ ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.