ರಾಜ್ಯ

ಐಟಿ ದಾಳಿಗೆ ಹೆದರಿ ಪರಮೇಶ್ವರ ಆಪ್ತ ಸಹಾಯಕ ನೇಣಿಗೆ ಶರಣು

ಬೆಂಗಳೂರು PRAJAKIRAN.COM : ಆದಾಯ ತೆರಿಗೆ ಇಲಾಖೆ ದಾಳಿಗೆ ಹೆದರಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಆಪ್ತ ಸಹಾಯಕ ನೇಣಿಗೆ ಶರಣಾದ ಘಟನೆ ಶನಿವಾರ ಬೆಂಗಳೂರಿನಲ್ಲಿ ನಡೆದಿದೆ.

ಡಾ. ಜಿ. ಪರಮೇಶ್ವರ ಆಪ್ತಸಹಾಯಕ ರಮೇಶ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿರುವ ಸಾಯಿ ಗ್ರೌಂಡ್ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಇವತ್ತು ಬೆಳಗ್ಗೆ ಸಾವಿಗೆ ಶರಣಾಗಿದ್ದಾನೆ.

ಅ.9ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಡಾ ಜಿ. ಪರಮೇಶ್ವರ ಮನೆಗೆ ದಾಳಿ ನಡೆಸಿದ ವೇಳೆ ಕರೆದುಕೊಂಡು ಹೋಗಿದ್ದರು.

ಆದರೆ ಶನಿವಾರ ಬೆಳಗ್ಗೆ ಏಕಾಎಕಿ ಆತ್ಮಹತ್ಮೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಮೇಶ ಅವರು, ಡಾ. ಜಿ. ಪರಮೇಶ್ವರ ಆಪ್ತ ಸಹಾಯಕನಾಗಿದ್ದ. ಈ ಮುಂಚೆ ಕೆಪಿಸಿಸಿ ಕಚೇರಿಯಲ್ಲಿ ಟೈಪಿಸ್ಟ ಆಗಿದ್ದ ರಮೇಶ ಅವರನ್ನು ಪರಮೇಶ್ವರ ಅವರು ಡಿಸಿಎಂ ಆಗಿದ್ದ ವೇಳೆ ಆಪ್ತಸಹಾಯಕನಾಗಿ ತೆಗೆದುಕೊಂಡಿದ್ದರು.

ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ಎರಡು ದಿನಗಳಿಂದ ರಮೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದರು. ಅದಕ್ಕೆ ಹೆದರಿ ಸಾವಿನ ಹಾದಿ ತುಳಿದಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ, ರಮೇಸ ಒಳ್ಳೆಯ ಹುಡುಗ. ಬೆಳಗ್ಗೆ ಅಷ್ಟೇ ನಾನು ಸಮಾಧಾನ ಪಡಿಸಿ, ಕಳುಹಿಸಿದ್ದೆ. ಯಾವುದೇ ಕಾರಣಕ್ಕೂ ಧೈರ್ಯಕಳೆದಕೊಳ್ಳಬೇಡ. ನಾನಿದ್ದೇನೆ ಎಂದು ಧೈರ್ಯ ತುಂಬಿದ್ದೆ.

ಆದರೆ ಈ ರೀತಿ ಸಾವಿಗೆ ಶರಣಾಗಿರುವುದು ನೋವು ತಂದಿದೆ. ಐಟಿ ಇಲಾಖೆ ಅಧಿಕಾರಿಗಳು ಏನಾದರೂ ಹೆದರಿಕೆ ಒಡ್ಡಿದ್ದೀರಾ ಎಂಬುದು ತಿಳಿದುಕೊಳ್ಳುತ್ತೇನೆ. ಬೆಳಗ್ಗೆ ಮನೆಗೆ ಹೋಗಿದ್ದ. ಐಟಿ ದಾಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಕ್ಕೆ ನಂಬಲು ಆಗಲ್ಲ ಎಂದು ಖೇದ ವ್ಯಕ್ತಪಡಿಸಿದರು.

Please follow and like us:

Leave a Reply

Your email address will not be published. Required fields are marked *