ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಂಸದ ಪ್ರಲ್ಹಾದ ಜೋಶಿ ವಿರುಧ್ದ ಟೀಕೆ ಮಾಡಿ ಮಾತನಾಡದಿದ್ದರೆ ಉಂಡ ಊಟ ಕರಗುವುದಿಲ್ಲ ಹಾಗೂ ನಿದ್ರೆ ಬರದಷ್ಟು ಹತಾಶರಾಗಿದ್ದಾರೆ ಎಂದು ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಹಾಗೂ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಕಿಡಿಕಾರಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಧಾರವಾಡದಲ್ಲಿ ನಡೆದ ರೈತರ ಹೊರಾಟದಲ್ಲಿ ಮಾತನಾಡುವಾಗ ವಿನಯ ಕುಲಕರ್ಣಿ ಸಂಸದ ಪ್ರಲ್ಹಾದ ಜೋಶಿ ವಿರುದ್ದ ಗಂಭೀರ ಆಪಾದನೆ ಮಾಡಿದ್ದಾರೆ. ಹಿಂದಿನ ಮುರುಘಾಮಠದ […]
Tag: #cong
ಬಿಜೆಪಿ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್
ಬೆಂಗಳೂರು : ಮೊಳಕಾಲ್ಮೂರು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಆಪ್ತ ಸುಜೀತ್ ಆಪರೇಶನ್ ಕಮಲ ಮಾಡಲು ಪ್ರಯತ್ನ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಸೂಚಿಸಿದೆ. ಈ ಹಿನ್ನಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಗೆ ಕರೆ ಮಾಡಿ ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲು ಸೂಚಿಸಿದ್ದಾರೆ. ಆಡಿಯೋ ಮಾಹಿತಿ ಕಲೆ ಹಾಕಿ ಅದನ್ನು […]
ಹೊಸ ವರ್ಷಕ್ಕೆ ಋಣಮುಕ್ತ ಪ್ರಮಾಣ ಪತ್ರ ಅಂದ್ರು ಕುಮಾರಸ್ವಾಮಿ
ಬೆಂಗಳೂರು : ಜನವೆರಿಯಲ್ಲಿ ಸಾಲಮನ್ನಾ ಋಣಮುಕ್ತ ಪ್ರಮಾಣ ಪತ್ರ ಹಂಚಿಕೆ ಮಾಡಲಾಗುತ್ತಿದೆ. ಜನೆವರಿಗೆ ಕಲಬುರಗಿ ಜಿಲ್ಲೆಯ ಸೇಡಂ ಹಾಗೂ ದೊಡ್ಡಬಳ್ಳಾಪುರದಲ್ಲಿ ಪ್ರಾಯೋಗಿಕ ಜಾರಿ ಮಾಡಲಾಗಿದೆ. ಎರಡು ತಾಲೂಕಿನ ಸಾಧಕ ಬಾಧಕ ನೋಡಿ ಎಲ್ಲಡೆ ವಿಸ್ತರಣೆ ಮಾಡಲಾಗುವುದು. ಈ ಬಗ್ಗೆ ಯಾವ ಆತಂಕ ಬೇಡ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಯ ನೀಡಿದ್ದಾರೆ. ಅವರು ಮಂಗಳೂರು ರಾಜ್ಯದ ಸಂಸದರ ಸಭೆಯನ್ನು ವಿಧಾನಸೌಧದಲ್ಲಿ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಬಾಕಿ ಇರುವ ಯೋಜನೆಗಳು, ಬರ ಪರಸ್ಥಿತಿ ಹೀಗೆ ಎಲ್ಲದ್ದಕ್ಕೂ ಕೇಂದ್ರದ […]
ಸಚಿವ ರೇವಣ್ಣ ವಿರುದ್ದ ಸಿದ್ದರಾಮಯ್ಯಗೆ ದೂರು ನೀಡಿದ ಕಾಂಗ್ರೆಸ್ಸಿಗರು
ಬೆಂಗಳೂರು : ಹಾಸನ ಜಿಲ್ಲೆಯ ಪ್ರತಿಯೊಂದು ವಿಷಯದಲ್ಲಿ ಲೋಕೋಪಯೋಗಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಮೂಗು ತೂರಿಸುತ್ತಿದ್ದಾರೆ. ಇದರಿಂದಾಗಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆಯೇ ಇಲ್ಲದಂತೆ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ಗೋಪಾಲಸ್ವಾಮಿ ಹಾಗೂ ಹೆಚ್. ಕೆ. ಮಹೇಶ, ಮಂಜೇಗೌಡ ಸೇರಿ 50ಕ್ಕೂ ಹೆಚ್ಚು ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ […]
ನಟಿ ರಮ್ಯಾಗೆ ಮಂಡ್ಯದಲ್ಲಿ ಭಾವಪೂರ್ಣ ಶ್ರದ್ದಾಂಜಲಿ !
ಮಂಡ್ಯ : ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ನಿಧನದ ವೇಳೆ ಮಂಡ್ಯಕ್ಕೆ ಆಗಮಿಸದ ಮಾಜಿ ಸಂಸದೆ ನಟಿ ರಮ್ಯಾ ಅವರಿಗೆ ಅಂಬರೀಶ್ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ, ರಮ್ಯ ಮಂಡ್ಯದ ಪಾಲಿಗೆ ಸತ್ತಂತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಲಾಗುತ್ತಿದೆ, ಮಂಡ್ಯದಲ್ಲಿ 18 ಗಂಟೆಗಳ ಕಾಲ ಪ್ರಾರ್ಥೀವ ಶರೀರ ದರ್ಶನಕ್ಕೆ ಇಟ್ಟರೂ ಮಾಜಿ ಸಂಸದೆ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯೂ ಆಗಿರುವ ರಮ್ಯ ಬಾರದಿರುವುದು ಮಂಡ್ಯದ ಜನತೆ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಮಟ್ಟದಲ್ಲಿ ಖರ್ಗೆಗಿಂತ […]
ಸುಳ್ಳು ವಿಳಾಸ ನೀಡಿದ ಪ್ರಕರಣ : 8 ವಿಧಾನ ಪರಿಷತ್ ಸದಸ್ಯರ ವಿರುದ್ದ ದೂರು ದಾಖಲು
ಬೆಂಗಳೂರು : ಸುಳ್ಳು ವಿಳಾಸ ನೀಡಿ ಕೋಟ್ಯಾಂತರ ರೂಪಾಯಿ ಪ್ರಯಾಣ ಭತ್ಯೆ ಪಡೆದ ಆರೋಪದ ಮೇಲೆ ರಾಜ್ಯದ ಎಂಟು ವಿಧಾನಪರಿಷತ್ ಸದಸ್ಯರ ಮೇಲೆ ಇದೀಗ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ಬೆಂಗಳೂರು ವಿಳಾಸ ನೀಡಿದ್ದ ಎಂಟು ವಿಧಾನ ಪರಿಷತ್ ಸದಸ್ಯರು ಪ್ರಯಾಣ ಭತ್ಯೆ ಪಡೆಯುವಾಗ ಮಾತ್ರ ಸುಳ್ಳು ವಿಳಾಸ ನೀಡಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ 8 […]