ಬೆಂಗಳೂರು : ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಸಿನಿಮಾ ಮತ್ತೇ 45 ವರ್ಷಗಳ ಬಳಿಕ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ವಿಷ್ಣು ಅಭಿಮಾನಿಗಳು ಥಿಯೇಟರ್ಗಳ ಮುಂದೆ ಬೆಳಗ್ಗೆಯಿಂದಲೇ ಕಾತರದಿಂದ ಬಿಗ್ ಸ್ಕ್ರಿನ್ ಮೇಲೆ ನೋಡಿ ಕಣ್ಣುತುಂಬಿಸಿಕೊಳ್ಳಲು ಕಾತರರಾಗಿದ್ದರು. ಹೈ ಟೆಕ್ನಾಲಜಿ ಬಳಸಿ 7.1 ಡಿಜಿಟಲ್ ಸೌಂಡ್ನಲ್ಲಿ ಪುನರ್ ನಿರ್ಮಾಣ ಮಾಡಿರುವ ಈ ಸಿನಿಮಾ ಇಂದು ಸುಮಾರು ರಾಜ್ಯದ 150ಕ್ಕೆ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಸಿನಿಪ್ರೇಕ್ಷಕರು ತಮ್ಮ ಕೆಲಸಕಾರ್ಯಗಳನ್ನು ಬದಿಗೊತ್ತಿ ವಿಷ್ಣುದಾದಾನ ನಾಗರಹಾವು ಸಿನಿಮಾ ಕಣ್ಣು […]
ಧಾರವಾಡ : ಆರು ದಿನಗಳ ಕಾಲ ಮಂಜುಗಡ್ಡೆಯಲ್ಲಿ ಬದುಕಿನ ಹೋರಾಟ ನಡೆಸಿ, ಕೊನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಹುತಾತ್ಮನಾದ ಕನ್ನಡದ ಗಂಡುಗಲಿ ವೀರ ಯೋಧ ಹನುಮಂತಪ್ಪ ಕೊಪ್ಪದ ಅವರ ಅನುಭವಗಳನ್ನಾಧರಿಸಿದ “ಮುಕ್ತಿ” ಚಲನಚಿತ್ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಇಲ್ಲಿನ ಶ್ರೀನಿವಾಸ ಚಿತ್ರಮಂದಿರದಲ್ಲಿ ಸಾಹಿತಿ, ಹಿರಿಯ ಪತ್ರಕರ್ತ ಮೋಹನ ನಾಗಮ್ಮನವರ್ ಬಿಡುಗಡೆಗೊಳಿಸಿದರು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನ ಹುಲಿ ವಿಶ್ವದ್ಯಾಂತ ಸದ್ದು ಮಾಡಿದ ಯಶೋಗಾಥೆ ಈ ಚಿತ್ರದಲ್ಲಿದೆ. ಅವರ ಬಾಲ್ಯ, ಜೀವನ, ಸೇನಾ ದಿನಗಳು ಅವರ ಕನಸು […]
ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ನಿವೇದಿತಾಗೌಡ ಅವರ ಕಿಕಿ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟಿ ಪ್ರಣೀತಾ ಕೂಡ ಕಿಕಿ ಡ್ಯಾನ್ಸ್ ಮಾಡಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಚಲಿಸುವ ವಾಹನದಿಂದ ಕೆಳಗಿಳಿದು ಮಾಡುವ ಈ ಕಿಕಿ ಡ್ಯಾನ್ಸ್ ತುಂಬಾ ಡೆಂಜರಸ್ ಆಗಿದ್ದು, ಪ್ರಾಣ ಕೂಡ ಕಳೆದುಕೊಳ್ಳುವ ಸಂಭವಗಳಿರುತ್ತವೆ. ಹೀಗಾಗಿ ಇದನ್ನು ನೀವು ಟ್ರಾಯಲ್ ಮಾಡಬೇಡಿ ಎಂದು ಸಂದೇಶ ನೀಡಿದ್ದಾರೆ. ನಿನ್ನೇಯಷ್ಟೇ ನಿವೇದಿತಾ ಗೌಡ ಕೂಡ ಇಂತಹ […]