ರಾಷ್ಟ್ರೀಯ

ರಾಹುಲ್-ಪ್ರಧಾನಿ ಅಪ್ಪುಗೆ ರಾಜಕೀಯ ಲಾಭಕ್ಕೆ ಬಳಸಿದ ಮಹಾರಾಷ್ಟ್ರ ಕಾಂಗ್ರೆಸ್

ಮುಂಬೈ : ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಅಪ್ಪಿಕೊಳ್ಳುವ ಮೂಲಕ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕಟೌಟ್ ಗಳನ್ನು ಮಹಾರಾಷ್ಟ್ರ ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ.

ನಾವು ಎಲ್ಲರನ್ನು ಅಪ್ಪಿಕೊಳ್ಳುವ ಮೂಲಕ ದೇಶವನ್ನು ಗೆಲ್ಲುತ್ತೇವೆ ಹೊರತು ದ್ವೇಷದಿಂದಲ್ಲ ಎಂಬ ಸಂದೇಶ ಅದರಲ್ಲಿ ಹಾಕಲಾಗಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಘಟಕ ಇಂತಹ ಬೃಹತ್ ಕಟೌಟ್ ಗಳನ್ನು ಮುಂಬೈ ಮಹಾನಗರದ ಹಲವು ಪ್ರಮುಖ ಬೀದಿಗಳಲ್ಲಿ ಅಳವಡಿಸುವ ಮೂಲಕ ದೇಶದ ಗಮನ ಸೆಳೇದಿದೆ.

ಇದು 2019ರ ಲೋಕಸಭಾ ಚುನಾವಣೆಗೆ ಮುನ್ನುಡಿ ಬರೆದಂತಿದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಂಡು ರಾಹುಲ್ ಅವರನ್ನು ಗೇಲಿ ಮಾಡಿತ್ತು. ಅದಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಈ ತಂತ್ರಗಾರಿಕೆಯನ್ನು ಹೆಣೆದಿದೆ.

Please follow and like us:

Leave a Reply

Your email address will not be published. Required fields are marked *