ರಾಜ್ಯ

ಬಡಮಕ್ಕಳ ಪರ ಧ್ವನಿ ಎತ್ತಿದ್ದು ತಪ್ಪಾ : ಶಾಸಕ ರಾಜೀವ ಪ್ರಶ್ನೆ

ಕುಡಚಿ : ಕುಡುಚಿ ಶಾಸಕ ಪಿ ರಾಜೀವ್ ಅವರು ಆರ್ ಟಿ ಇ ಕುರಿತು ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ನಾನು ಬಡಮಕ್ಕಳ ಹಾಗೂ ಪೋಷಕರ ಪರ ಧ್ವನಿ ಎತ್ತಿದ್ದು ತಪ್ಪು ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ನನಗೆ ಸಾಕಷ್ಟು ದೂರುಗಳು ಬಂದಿದ್ದವು. ಕೆಲ ಶಾಲೆಗಳು ಬಡಮಕ್ಕಳಿಗೆ ಯುನಿಫಾರಂ, ಪಠ್ಯಪುಸ್ತಕಗಳ ಹೆಸರಲ್ಲಿ ಹಣ ವಸೂಲಿಮಾಡುತ್ತಿದ್ದಾರೆ. ಇದಕ್ಕಾಗಿ ನಾನು ಹಣ ಕೊಡಬೇಡಿ ಎಂದು ಹೇಳಿದ್ದೇನೆ. ಆದರೂ ನನ್ನ ವಿರುದ್ದ ಅಪಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲ ಶಾಲೆಗಳಂತೂ ಮಕ್ಕಳನ್ನು ಹೊರಗಡೆ ನಿಲ್ಲಿಸುತ್ತಾರೆ. ರಾಜ್ಯ ಸರಕಾರ ಈ ಬಗ್ಗೆ ಸ್ಪಷ್ಟ ಆದೇಶ ನೀಡಿದ್ದರೂ ಖಾಸಗಿ ಶಾಲೆಗಳು ಅದನ್ನು ಪಾಲಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.

Please follow and like us:

Leave a Reply

Your email address will not be published. Required fields are marked *