ರಾಜ್ಯ

ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ್ ವಿರುದ್ಧ ರಮೇಶಕುಮಾರ್ ವಾಗ್ದಾಳಿ

ಗೋಕಾಕ್ PRAJAKIRAN.COM : ಕಾಂಗ್ರೆಸ್ ಪಕ್ಷದಲ್ಲಿ ಚಮಚಾಗಿರಿ ಮಾಡುವರಿಗೆ ಮನ್ನಣೆ ಎಂಬ ರಮೇಶ್ ಜಾರಕಿಹೊಳಿ ಆರೋಪಕ್ಕೆ ಮಾಜಿ ಸ್ಪೀಕರ್ ರಮೇಶಕುಮಾರ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಚಮಚಾಗಳಿಗೆ ಚಮಚಾಗಿರಿ ವ್ಯವಸ್ಥೆ ಗೊತ್ತು. ನಾನು ಅಪ್ಪಾ ಅಮ್ಮನಿಗೆ ಹುಟ್ಟಿದವನು, ನಮಗೆ ಚಮಚಾಗಿರಿ ಬಗ್ಗೆ ಅಷ್ಟಾಗಿ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಹೃದಯ ಸಂಬಂಧಿ ಕಾಯಿಲೆಯಿಂದ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲು ವಿಚಾರಕ್ಕೆ ಕೂಡ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ ರಮೇಶಕುಮಾರ್ ಹಾರ್ಟ್ ಇದ್ರೆ ಶ್ರೀಮಂತ ಪಾಟೀಲ್ ತಾಯಿಗಂಡತನ ಮಾಡುತ್ತಿರಲಿಲ್ಲ ಎಂದು ಶ್ರೀಮಂತ ಪಾಟೀಲ್ ವಿರುದ್ಧವೂ ವಾಗ್ದಾಳಿ ನಡೆಸಿದರು.

ಈ ಚುನಾವಣೆ ಕಾಂಗ್ರೆಸ್, ‌ಬಿಜೆಪಿ ನಡುವೆ ಅಲ್ಲ. ಇದು ಸಂವಿಧಾನದ ಪರ, ವಿರೋಧಿ ಹೋರಾಟ

ದೇಶ ಉಳಿಯಬೇಕು ಅಂದ್ರೆ ಸಂವಿಧಾನ ಉಳಿಯಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಬಾಕಿ ಉಳಿದಿರೋ ತೀರ್ಪನ್ನು ಜನ ಕೋಡ್ತಾರೆ. 15 ಕ್ಷೇತ್ರದಲ್ಲಿ ಸಂವಿಧಾನಕ್ಕೆ ಗೆಲುವು ಆಗಲಿದೆ. ಅನರ್ಹ ಶಾಸಕರು ಗೆದ್ದರೆ ಸಂವಿಧಾನಕ್ಕೆ ಹಿನ್ನಡೆಯಾಗಲಿದೆ ಎಂದು ಹೇಳಿದರು.

ಅಲ್ಲದೆ, ನಾನು ಕಾಗವಾಡಕ್ಕೆ ಹೋದಾಗ ಶ್ರೀಂಮತ ಪಾಟೀಲಗೆ ಹಾರ್ಟ್ ಅಟ್ಯಾಕ್ ಆಗಿರಬೇಕು.

ನನ್ನ ಹೆಸರು ಹೇಳಿದರೆ ಹಲವರಿಗೆ ಹಾರ್ಟ್ ಅಟ್ಯಾಕ್ ಆಗುತ್ತದೆ. ಈಗಲೂ ರಮೇಶ ಜಾರಕಿಹೊಳಿ‌ ನನ್ನ ಸ್ನೇಹಿತ. ನನ್ನ ಮಾತು ಕೇಳಿದ್ರೆ ಮಣ್ಣು ತಿನೋದು ಬೇಡ ಅಂತ ಹೇಳುತ್ತಿದೆ ಎಂದು ಗೋಕಾಕ್‌ನಲ್ಲಿ ಮಾಜಿ ಸ್ಪೀಕರ್ ರಮೇಶ ಕುಮಾರ ಹೇಳಿಕೆ ನೀಡಿದ್ದಾರೆ.

ರಾಜೀನಾಮೆ ಎನ್ನುವುದು ಗೌರವಯುತ ಪ್ರಕ್ರಿಯೆ, ಆದರೆ ಅನರ್ಹ ಎನ್ನುವುದು ಶಿಕ್ಷೆ. ಕದ್ದು ಮುಚ್ಚಿ ಮುಂಬೈಗೆ ಹೋಗಿ ರಾಜೀನಾಮೆ ಕೊಡುವುದು ರಾಜೀನಾಮೆ ಅಲ್ಲ ಎಂದು ರಮೇಶ್ ಜಾರಕಿಹೊಳಿ‌ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು.

ಪಕ್ಷಾಂತರ ನಿಷೇಧ ಕಾಯ್ದೆ, ಪ್ರಜಾಪ್ರತಿನಿಧಿ ಕಾಯ್ದೆ ಇನ್ನೂ ಸಮರ್ಪಕವಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

Please follow and like us:

Leave a Reply

Your email address will not be published. Required fields are marked *