ರಾಜ್ಯ

ದೇವಸ್ಥಾನದ ಪ್ರಾರಂಭೋತ್ಸವಕ್ಕೆ ಮಡಿ ಹಾಕದ‌ ಕುಟುಂಬಕ್ಕೆ ಗ್ರಾಮಸ್ಥರ ಬಹಿಷ್ಕಾರ

ಬಿಳಿಗಿರಿ ಶ್ರೀನಿವಾಸ

ಚಾಮರಾಜನಗರ PRAJAKIRAN.COM : ದೇವಸ್ಥಾನದ ಪ್ರಾರಂಭೋತ್ಸವಕ್ಕೆ ಮಡಿ ಹಾಕದ‌ ಮಡಿವಾಳ ಜನಾಂಗದ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರದ ಶಿಕ್ಷೆ ನೀಡಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆಂಕಲಹುಂಡಿ ಗ್ರಾಮದಲ್ಲಿಯೇ ಈ ಬಹಿಷ್ಕಾರ ಹಾಕಲಾಗಿದೆ.

ಅಲ್ಲಿಯ ದೇವಸ್ದಾನದ ಕಾರ್ಯಕ್ಕೆ ಮಡಿ ಹಾಕಲಿಲ್ಲ ಎಂದು ಒಂದು ಕುಟುಂಬಕ್ಕೆ ಯಾವುದೇ ತರನಾದ ಒಡನಾಟ ಅಥವಾ ವ್ಯವಹಾರ ನಡೆಸದಂತೆ ಗ್ರಾಮಸ್ದರು ಬಹಿಷ್ಕಾರ ಹಾಕಿದ್ದಾರೆ.

ತೆಂಕಲಹುಂಡಿ ಗ್ರಾಮದ ಸಿದ್ದಶೆಟ್ಟಿ ಎಂಬ ಕುಂಟುಂಬವೇ ಬಹಿಷ್ಕಾರಕ್ಕೆ ಒಳಗಾದ ಕುಟುಂಬವಾಗಿದ್ದು . ತೆಂಕಲಹುಂಡಿ ಗ್ರಾಮದ ಸಮೀಪವಿರುವಮಂಚಹಳ್ಳಿ ಬೀರೇಶ್ವರ ದೇವಸ್ದಾನ ಪ್ರಾರಂಭೋತ್ಸವಕ್ಕೆ ಮಡಿ ಹಾಕದಿರುವುದನ್ನೆ ನೆಪ ಮಾಡಿಕೊಂಡಿರುವ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.

ಇದರಿಂದ ಮನನೊಂದಿರುವ ಕುಟುಂಬ ಇದೀಗ ಗುಂಡ್ಲುಪೇಟೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿ ರಕ್ಷಣೆ‌ ಕೋರಿದೆ.

ಕಾನೂನು ಬಲಗೊಂಡಿರುವ ಕಾಲದಲ್ಲೂ ಬಹಿಷ್ಕಾರದಂತಹ ಅನಿಷ್ಟ ಪದ್ದತಿ ಜೀವಂತವಾಗಿರುವುದು ನಿಜಕ್ಕೂ ಕೂಡ ಜನರು ತಲೆ ತಗ್ಗಿಸುವಂತಾಗಿದೆ ಎಂದರೆ ತಪ್ಪಾಗಲಾರದು.

ಅದಕ್ಕೆ ಚಾಮರಾಜನಗರ ಜಿಲ್ಲಾಡಳಿತ ಯಾವ ರೀತಿ ಸ್ಪಂದಿಸುತ್ತದೆ. ಗ್ರಾಮಸ್ಥರಿಗೆ ಈ ಬಗ್ಗೆ ತಿಳುವಳಿಕೆ ನೀಡಿ ಆ ಸಿದ್ದಶೆಟ್ಟಿ ಕುಟುಂಬಕ್ಕೆ ರಕ್ಷಣೆ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *