ಬೆಂಗಳೂರು : ರಾಜ್ಯದ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸು ನೀಡುವಂತೆ ಆಗ್ರಹಿಸಿ ಜುಲೈ 21ರಂದು ಶನಿವಾರ ಅಖಿಲ ಕರ್ನಾಟಕ ಸ್ವಯಂಪ್ರೇರಿತ ಶಾಲಾ-ಕಾಲೇಜು ಬಂದ್ ಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿವೆ.
ಬಂದ್ ಗೆ ಈಗಾಗಲೇ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಕೂಡ ಬಂದ್ ಬೆಂಬಲಿಸುವಂತೆ ಮನವಿ ಮಾಡಲು ಕೆಲ ಸಂಘಟನೆಗಳು ಆಟೋ ಮೂಲಕ ಪ್ರಚಾರ ಕೈಗೊಂಡಿವೆ.
ಎಐಡಿಎಸ್‌ಒ, ಎಐಎಮ್‌ಎಸ್‌ಎಸ್, ಎಐಡಿವೈಒ ಸಂಘಟನೆಗಳು ಈ ಶಾಲಾ ಕಾಲೇಜು ಬಂದ್ ಗೆ ಕರೆ ನೀಡಿವೆ. ಧಾರವಾಡ, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ್ಯಾಂತ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕೆಲ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಸಹ ಈ ಬಂದ್ ಗೆ ಬೆಂಬಲ ನೀಡಿವೆ. ನಾಳೆ ಬಂದ್ ಬಹುತೇಕ ಯಶಸ್ವಿಯಾಗುವ ಸಾಧ್ಯತೆಗಳಿವೆ.