ಧಾರವಾಡ : ದೇವರ ಭೇಟಿಗೆ ಹೋಗುವವರು ಅರಸನಂತೆ ಹೋಗುವ ಬದಲಿಗೆ ಗುಲಾಮರಾಗಿ ಹೋದರೆ ದೇವರು ಕೂಡ ಮೆಚ್ಚುತ್ತಾನೆ ಎಂದು ಮೌಲಾನಾ ಮಹ್ಮದ ಮಜೀಬ ಅಶ್ರಫ ಹೇಳಿದರು.
ಅವರು ಅಂಜುಮನ್ ಇಸ್ಲಾಂ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ ಹಜ್ ಯಾತ್ರಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಹಜ್ ಹಾಗೂ ಉಮರಾ ಯಾತ್ರೆ ಕೈಗೊಳ್ಳುವವರಿಗೆ ದೇವರು ರೋಗಮುಕ್ತ ಶರೀರದಿಂದ ಮುಕ್ತಿಕೊಡುತ್ತಾನೆ. ಯಾತ್ರೆ ಮಾಡುವವನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದರು.
ಪ್ರತಿಯೊಬ್ಬ ಮುಸಲ್ಮಾನ ಬಂಧು ಕುರಾನ್ ಪಠಣ, ನಮಾಜ್, ರೋಜಾ, ಜಕಾತ್ ಹಾಗೂ ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಹಜ್ ಯಾತ್ರೆ ಕೈಗೊಂಡರೆ ಬದುಕು ಸಮೃದ್ಧವಾಗುತ್ತದೆ ಎಂದರು.
ಮೌಲಾನಾ ಮಹಮ್ಮದ ಖಲೀಲ ಉಲ್ ರೆಹಮಾನ್, ಎಕ್ಸಿಸ್ ಬ್ಯಾಂಕಿನ ವ್ಯವಸ್ಥಾಪಕ ಟಿ. ಶ್ರೀರಾಮ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ, ಕಾರ್ಯದರ್ಶಿ ನಜೀರ ಹುಸೇನ ಮನಿಯಾರ, ಜಂಟಿ ಕಾರ್ಯದಾರ್ಶಿ ರಫೀಕ ಅಹ್ಮದ ಶಿರಹಟ್ಟಿ, ಉಪಾಧ್ಯಕ್ಷರಾದ ಅಲ್ ಹಜ್ ಅಜೀಜ ದಾಸನಕೊಪ್ಪ ಉಪಸ್ಥಿತರಿದ್ದರು.