ಧಾರವಾಡ : ಭಾರತೀಯರ ಪಾಲಿಗೆ ಸ್ವಾತಂತ್ರ್ಯೋತ್ಸವ ಸಂಭ್ರಮದ ರಾಷ್ಟ್ರೀಯ ಹಬ್ಬ. ಈ ಹೆಮ್ಮೆಯ ಹಬ್ಬದ ಆಚರಣೆಗೆ ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸುಣ್ಣ-ಬಣ್ಣದಿಂದ ಬೆಳಗುವಲ್ಲಿ ಮುಖ್ಯ ಶಿಕ್ಷಕರನ್ನೊಳಗೊಂಡು ಎಲ್ಲ ಬೋಧಕ ಸಿಬ್ಬಂದಿ ಆಸಕ್ತಿಯಿಂದ ಶ್ರಮಿಸಬೇಕೆಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಉಪನಿರ್ದೇಶಕ ಎನ್.ಎಚ್. ನಾಗೂರ ಸೂಚಿಸಿದ್ದಾರೆ.
ಮುಖ್ಯಾಧ್ಯಾಪಕರು ತುರ್ತಾಗಿ ಎಸ್.ಡಿ.ಎಂ.ಸಿ. ಸಭೆ ನಡೆಸುವ ಮೂಲಕ ದಾನಿ ಇಲ್ಲವೇ ಗಣ್ಯರನ್ನು ಸಂಪರ್ಕಿಸಿ ಆರ್ಥಿಕ ನೆರವು ಪಡೆದುಕೊಂಡು ಶಾಲೆಗಳಿಗೆ ಸುಣ್ಣಬಣ್ಣ ಬಳಿಸಲು ಮುಂದಾಗಬೇಕು. ಸಾರ್ವಜನಿಕರು, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕಿಯರು ತಮ್ಮ ತಂದೆ, ತಾಯಿ ಇಲ್ಲವೇ ತಮಗೆ ಬದುಕಿನ ಪಾಠ ಕಲಿಸಿದ ಗುರುಗಳ ಹೆಸರಿನಲ್ಲಿ ಶಾಲೆಗೆ ಸ್ವಾತಂತ್ರೋತ್ಸವದ ನೆನಪಿನಲ್ಲಿ ಶಾಲಾ ಹೊರಾಂಗಣವನ್ನು ಸುಣ್ಣಬಣ್ಣದಿಂದ ಅಲಂಕಾರಗೊಳಿಸಲು ಮುಂದಾಗುವಂತೆ ನಮ್ಮ ಶಿಕ್ಷಕ ಸಂಕುಲ ಪ್ರಯತ್ನ ಮಾಡಬೇಕು. ಜೊತೆಗೆ ಈಗಾಗಲೇ ಶಾಲೆಯಲ್ಲಿ ಲಭ್ಯ ಅನುದಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಶಾಲಾ ಅಲಂಕಾರಕ್ಕೆ ಮುಂದಾಗಬೇಕು ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ಶಾಲೆಯಲ್ಲಿ ಸಂಪೂರ್ಣ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಹೊರ ಗೋಡೆಗಳು, ಆವಾರಗೋಡೆಗಳು ಹಾಗೂ ಧ್ವಜಸ್ತಂಬದ ಕಟ್ಟೆ ಎಲ್ಲವೂ ಸುಣ್ಣ ಬಣ್ಣದಿಂದ ಅಲಂಕಾರಗೊಳ್ಳಬೇಕು. ಸ್ವಾತಂತ್ರ್ಯೋತ್ಸವನ್ನು ನಾವು ಪ್ರತಿ ವರುಷ ಆಚರಿಸುತ್ತಿದ್ದರೂ ಸಹಿತ ವರುಷದಿಂದ ವರುಷಕ್ಕೆ ಹೊಸತು ಕಾರ್ಯಚಟುವಟಿಕೆಗಳು ಎಲ್ಲ ಶಾಲಾ ಅಂಗಳದಲ್ಲಿ ಎದ್ದು ಕಾಣಬೇಕು. ರಾಷ್ಟ್ರಭಕ್ತಿಯ ವ್ಯಾಪಕ ವಿಕಾಸಕ್ಕೆ ಸ್ವಾತಂತ್ರ್ಯ ದಿನ ಸಾಕ್ಷಿಯಾಗಬೇಕು ಎಂದವರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕಿನ ಎಲ್ಲ ಸಿಆರ್‌ಪಿ, ಬಿಆರ್‌ಪಿ ಹಾಗೂ ಶಿಕ್ಷಣ ಸಂಯೋಜಕರ ಸಭೆ ಜರುಗಿಸಿ ಎಲ್ಲ ಶಾಲೆಗಳಿಗೆ ತಕ್ಷಣವೇ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ಮಾಡುವಂತೆ ಡಿಡಿಪಿಐ ಎನ್.ಎಚ್. ನಾಗೂರ ಆದೇಶ ಹೊರಡಿಸಿದ್ದಾರೆ.
ಧಾರವಾಡ : ಮಕ್ಕಳು ಸದಾಕಾಲ ಕ್ರಿಯಾಶೀಲರಾಗಿರಲು ಕ್ರೀಡೆ ಸಹಕಾರಿಯಾಗಿದ್ದು, ಇದರಿಂದ ಅವರ ಮನಸ್ಸು ಸದಾ ಉಲ್ಲಸಿತವಾಗಿರುತ್ತದೆ ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹೇಳಿದರು. ಅವರು ಶುಕ್ರವಾರ ಧಾರವಾಡ ತಾಲೂಕಿನ ಹೊಸಟ್ಟಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ತಡಕೋಡ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ” ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶಗಳಿಗೆ ಹೊಲಿಸಿದರೆ ಆರೋಗ್ಯವಾಗಿಯೂ ಗಟ್ಟಿಮುಟ್ಟಿಯಾಗಿಯೂ ಇರುತ್ತಾರೆ. ಅವರಿಗೆ ಇಂತಹ ಕ್ರೀಡೆಗಳನ್ನು ಇನ್ನಷ್ಟು ಶಕ್ತಿ ತುಂಬುವ ಮೂಲಕ ಮಾನಸಿಕ ಹಾಗೂ ದೈಹಿಕ […]
ಧಾರವಾಡ : ಹುಬ್ಳಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಪರಿವರ್ತನ ಫೌಂಡೇಶನ, ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಹಯೋಗದಲ್ಲಿ ಸೋಮವಾರ ಪಂಚವಟಿ ಅಭಿಯಾನ ನಡೆಯಿತು. ನಗರದ ಪರಿಸರ ಭವನದ ಉದ್ಯಾನವನದಲ್ಲಿ ಐದು ಔಷಧೀಯ ಪರಿಸರ ಪೂರಕ ವೃಕ್ಷ ಸಮೂಹದ ಪಂಚವಟಿ ಸಸಿಗಳಾದ ಪತ್ರಿ, ಬನ್ನಿ, ಬೇವು, ಅರಳಿ ಹಾಗೂ ಅತ್ತಿಗಿಡಗಳನ್ನು ನೆಡಲಾಯಿತು. ಈ ಅಭಿಯಾನಕ್ಕೆ ಬಾಗಲಕೋಟೆಯ ಆಲಮಟ್ಟ ನರ್ಸರಿಯಿಂದ ನಾಗರಾಜ ಮುಧೋಳ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಕಾರ್ಯದರ್ಶಿ ಡಾ. ವಿಲಾಸ ಕುಲಕರ್ಣಿ, […]
ಅಳ್ನಾವರ : ಹೊಸದಾಗಿ ರಚನೆಯಾದ ಅಳ್ನಾವರ ತಾಲೂಕಿಗೆ ಸೇರ್ಪಡೆಗೊಳ್ಳದೆ ಧಾರವಾಡ ತಾಲೂಕಿನಲ್ಲಿ ಉಳಿದ ಕೆಲವು ಗ್ರಾಮಗಳ ರೈತರಿಗೆ ಬೆಳೆವಿಮೆ ತುಂಬಲು ಕಾಲಾವಕಾಶ ಹೆಚ್ಚಸುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ರೈತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬೆಳೆವಿಮೆ ತುಂಬಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಇನ್ನೂ ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಅಳ್ನಾವರ ತಾಲೂಕಿಗೆ ಸೇರ್ಪೇಡೆಗೊಳ್ಳದೆ ಧಾರವಾಡ ತಾಲೂಕಿನಲ್ಲಿಯೇ ಉಳಿದ […]