ಧಾರವಾಡ : ಮಕ್ಕಳು ಸದಾಕಾಲ ಕ್ರಿಯಾಶೀಲರಾಗಿರಲು ಕ್ರೀಡೆ ಸಹಕಾರಿಯಾಗಿದ್ದು, ಇದರಿಂದ ಅವರ ಮನಸ್ಸು ಸದಾ ಉಲ್ಲಸಿತವಾಗಿರುತ್ತದೆ ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹೇಳಿದರು.
ಅವರು ಶುಕ್ರವಾರ ಧಾರವಾಡ ತಾಲೂಕಿನ ಹೊಸಟ್ಟಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ತಡಕೋಡ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ” ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶಗಳಿಗೆ ಹೊಲಿಸಿದರೆ ಆರೋಗ್ಯವಾಗಿಯೂ ಗಟ್ಟಿಮುಟ್ಟಿಯಾಗಿಯೂ ಇರುತ್ತಾರೆ. ಅವರಿಗೆ ಇಂತಹ ಕ್ರೀಡೆಗಳನ್ನು ಇನ್ನಷ್ಟು ಶಕ್ತಿ ತುಂಬುವ ಮೂಲಕ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ವಿಕಸನಗೊಳಿಸುತ್ತವೆ. ಹೀಗಾಗಿ ಅವರಿಗೆ ಪಾಠದೊಂದಿಗೆ ಆಟದ ಅಗತ್ಯವಿದೆ. ಅದಕ್ಕೆ ಎಲ್ಲರೂ ಅಗತ್ಯ ಸಹಕಾರ ನೀಡಬೇಕು ಆ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತವನಪ್ಪಾ ಅಷ್ಟಗಿ, ಜಿಪಂ ಸದಸ್ಯೆ ರತ್ನಾ ಪಾಟೀಲ. ತಾಪಂ ಸದಸ್ಯರಾದ ರವಿವರ್ಮ ಪಾಟೀಲ, ಮಹದೇವ ದಂಡಿನ, ಗ್ರಾಪಂ ಸದಸ್ಯರಾದ ಸುರೇಶ ಕಮ್ಮಾರ ಉಪಸ್ಥಿತರಿದ್ದರು.
ಬಳಿಕ ತಡಕೋಡ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ಧಾರವಾಡ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರು ಬುಧವಾರ ಧಾರವಾಡದಲ್ಲಿ ಹಿರಿಯ ಕವಿ ನಾಡೋಜ ಡಾ.ಚನ್ನವೀರ ಕಣವಿ ಅವರ ಮನೆಗೆ ಭೇಟಿ ನೀಡಿ ಕೆಲ ಕಾಲ ಮಾತುಕತೆ ನಡೆಸಿದರು. ನಾಡಿನ ಸಾಹಿತ್ಯ ,ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಕಣವಿ ಅವರೊಂದಿಗೆ ಸಮಾಲೋಚಿಸಿದ ಅವರು, ಕೆಲವು ಸಲಹೆಗಳನ್ನು ಪಡೆದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ […]
ಧಾರವಾಡ : ಕನ್ನಡ, ನಾಡು, ನುಡಿ, ಗಡಿ, ಜಲಕ್ಕಾಗಿ, ಕಳೆದ ೧೦ ವರ್ಷಗಳಿಂದಲೂ ಹೋರಡುತ್ತಿರುವ ಹೋರಾಟಗಾರರ ಮೇಲೆ ದಾಖಲಾಗಿರುವ ಸುಮಾರು ಒಂದು ಲಕ್ಷದ ಇಪ್ಪತೈದು ಸಾವಿರ ಮೊಕದ್ದಮೆಗಳನ್ನು ಸರಕಾರ ಮರಳಿ ಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಧಾರವಾಡ ಜಿಲ್ಲಾ ಘಟಕ ಗುರುವಾರ ಪ್ರತಿಭಟನೆ ನಡೆಸಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರ ಹಲವು ಪ್ರಕರಣಗಳಲ್ಲಿ ಪೋಲಿಸ ಇಲಾಖೆ ಕಾರ್ಯಕರ್ತರ ಮೇಲೆ ರೌಡಿಶೀಟರ್ ಹಾಕಿ ಧ್ವನಿಯನ್ನು ಅಡಗಿಸುವ ಕೆಲಸ ಮಾಡುತ್ತಲಿವೆ. ಎಲ್ಲ ಸರಕಾರಗಳು ಕನ್ನಡ […]
ಧಾರವಾಡ ಇಲ್ಲಿಯ ಗುಲಗಂಜಿಕೊಪ್ಪದ ಹೊಸ ಓಣಿಯಲ್ಲಿ ಶತಮಾನದ ನಂತರ ನಡೆಯುತ್ತಿರುವ ಮೊಟ್ಟ ಮೊದಲ ಜಾತ್ರಾ ಸಂಭ್ರಮ ಗುರುವಾರ ಮುಗಿಲು ಮುಟ್ಟಿತ್ತು. ಗುಲಗಂಜಿಕೊಪ್ಪದ ಅಧಿದೇವತೆಯರಾದ ದ್ಯಾಮವ್ವ ಹಾಗೂ ದುರಗವ್ವ ದೇವಿ ಜಾತ್ರೆ ಹಿನ್ನಲೆಯಲ್ಲಿ ಬಂಡಾರ ಸೇವೆ ಸಂಭ್ರಮ ಭಕ್ತರ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಬೆಳಗ್ಗೆಯಿಂದಲೇ ಇದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದ ಭಕ್ತ ಸಮೂಹ ಸಂಜೆಯವರೆಗೆ ಉಭಯ ದೇವಿಯರನ್ನು ಹೊತ್ತುಕೊಂಡು ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಭಕ್ತಿ ಭಾವವನ್ನು ಪಸರಿಸುವಲ್ಲಿ ಯಶಸ್ವಿಯಾಯಿತು. ದೇವಿಗೆ ಚೀಲಗಟ್ಟಲೇ ಬಂಡಾರ ಎರಚಿ ಕುಣಿದು ಕುಪ್ಪಳಿಸಿದ ಮಕ್ಕಳು, ಯುವ […]