ಬೆಂಗಳೂರು : ಬೆಂಗಳೂರಿನ ಜನನೀಬಿಡ ರಸ್ತೆಯಲ್ಲಿಯೇ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಪುತ್ರಿ ಶನಾ ಕಾರು ಬಾರು ಜೋರಾಗಿದೆ.
ನಡು ರಸ್ತೆಯಲ್ಲಿ ಮನಬಂದಂತೆ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದಲ್ಲದೆ, ಡ್ರ್ಯಾಗ್ ರೇಸ್ ಮಾಡಿದರೂ ಬೆಂಗಳೂರು ನಗರ ಸಂಚಾರ ಪೊಲೀಸರು ಕಣ್ಣು ಮುಚ್ಚಿ ಕುಳಿತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಉಪಮುಖ್ಯಮಂತ್ರಿ ಹಾಗೂ ಸಚಿವರ ಮಕ್ಕಳ ವಿಷಯದಲ್ಲಿ ಪೊಲೀಸರ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ರಸ್ತೆ ಸಂಚಾರ ನಿಯಮ ಪಾಲಿಸದೆ ಇರುವ ವಾಹನ ಸವಾರರಿಗೆ ಕಿರಿಕಿರಿ ಮಾಡುವ ಪೊಲೀಸರು ಈ ವಿಷಯದಲ್ಲಿ ಏಕೆ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಎಲ್ಲರೂ ಟ್ರಾಫೀಕ್ ಪೊಲೀಸರತ್ತ ಬೊಟ್ಟು ಮಾಡುತ್ತಿದ್ದಾರೆ.
ಇದು ಡೇಂಜರಸ್ ಡ್ರೈವಿಂಗ್ ಆಗಿರುವುದು ಹಿಂಬದಿ ವಾಹನ ಸವಾರರು ಮೊಬೈಲ್ ನಲ್ಲಿ ಶೂಟಿಂಗ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಯರ್ರಾಬಿರಿ ಡ್ರೈವಿಂಗ್ ಮಾಡಿದ್ದು, ಡಿಸಿಎಂ ಮಗಳಿಗೆ ಟ್ರಾಫೀಕ್ ರೂಲ್ಸ್ ಅನ್ವಯಿಸುವುದಿಲ್ಲ ಎಂಬ ಪ್ರಶ್ನೇ ಎದುರಾಗಿದೆ.
ಅದು ಅಲ್ಲದೆ, ಫಾರ್ಮೂಲಾ ಒನ್ ರೇಸ್ ಮಾದರಿ ಚಾಲನೆ ಮಾಡಿರುವ ಶನಾ ವಿರುದ್ದ ಪೊಲೀಸರು ಈಗಲಾದರೂ ಕ್ರಮ ಜರುಗಿಸುತ್ತಾರೆಯೇ ಇಲ್ಲವೇ ಕಾದು ನೋಡಬೇಕಿದೆ.