ರಾಮನಗರ : ರೈತ ಮಹಿಳೆಗೆ ನಾಲ್ಕು ವರ್ಷ ಎಲ್ಲಿ ಮಲಗಿದ್ದಿಮ್ಮಾ ಎಂಬ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಯನ್ನು ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಸಹಕಾರ ಸಚಿವ ಬಂಡೆಪ್ಪಾ ಕಾಶೆಂಪೂರ ಸರ್ಮಥಿಸಿಕೊಂಡಿದ್ದಾರೆ,
ಅವರಿಗೆ ರೈತರಿಗೆ ಬಗ್ಗೆ ಅಪಾರವಾದ ಗೌರವವಿದೆ. ಅದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ. ರೈತರೊಂದಿಗೆ ಕರೆದು ಮಾತನಾಡಿ, ಕಬ್ಬಿನ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಿದ್ದಾರೆ. ಈ ಬಗ್ಗೆ ಪರ ವಿರೋಧ ಟೀಕೆ ಹಾಗೂ ರಾಜಕೀಯ ಉದ್ದೇಶಗಳಿಗೆ ಈ ಹೇಳಿಕೆಯನ್ನು ಬಳಸಿಕೊಳ್ಳಬಾರದು ಎಂದು ಕುಮಾರಸ್ವಾಮಿ ಪರ ಬ್ಯಾಟಿಂಗ್ ಬೀಸಿದ್ದಾರೆ.
ರಾಜ್ಯಾದ್ಯಂತ ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿರುವ ಬೆನ್ನಹಿಂದೆಯೇ ಕುಮಾರಸ್ವಾಮಿ ಪರ ಫೀಲ್ಡಿಂಗ ಇಳಿದಿರುವ ಇವರ ನಡೆಯನ್ನೇ ಎಲ್ಲರೂ ಪ್ರಶ್ನಿಸುವಂತಾಗಿದೆ.
ಸ್ವತಃ ಸಮ್ಮೀಶ್ರ ಸರಕಾರದ ಭಾಗವಾಗಿರುವ ಕಾಂಗ್ರೆಸ್ ನಾಯಕರು ನಾಲ್ಕು ವರ್ಷ ಎಲ್ಲಿ ಮಲಗ್ಗಿದ್ದಿಮ್ಮಾ ಹೇಳಿಕೆಗೆ ಅಪಸ್ವರ ಎತ್ತಿದ್ದು, ಈ ರೀತಿ ಮಾತನಾಡಬಾರದಿತ್ತು. ರೈತರ ಹಾಗೂ ವಿಶೇಷವಾಗಿ ಹೋರಾಟಗಾರರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಈ ನಡುವೆ ಕುಮಾರಸ್ವಾಮಿ ರೈತ ಮಹಿಳೆಗೆ ಮಾಡಿರುವ ಅಪಮಾನ ಇಡೀ ರಾಜ್ಯದ ಮಹಿಳಾ ಸಂಕುಲಕ್ಕೆ ತೋರಿದ ಅಗೌರವ. ಅವರು ಬಹಿರಂಗವಾಗಿ ಕ್ಷಮೆ ಕೇಳಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಈ ನಡುವೆ ಸಿಎಂ ಕುಮಾರಸ್ವಾಮಿ ಕೂಡ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಆದರೆ ಅದರಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ವಿವಾದ ಉಗ್ರ ಸ್ವರೂಪ ಪಡೆಯುತ್ತಿದ್ದು, ಕುಮಾರಸ್ವಾಮಿ ಕ್ಷಮೆ ಕೇಳ್ತಾರಾ ಅಥವಾ ರಾಜಕೀಯ ವಿರೋಧಿಗಳಿಗೆ ಹೋರಾಟ ನಡೆಸಲು ತಾವಾಗಿಯೇ ಅಸ್ತ್ರ ನೀಡುತ್ತಾರೆಯೇ ಕಾದು ನೋಡಬೇಕಿದೆ.