ರಾಜ್ಯ

ಮಹೇಶ ಕುಮಟಳ್ಳಿಗೆ ಸ್ವಗ್ರಾಮದಲ್ಲಿಯೇ ಬಹಿಷ್ಕಾರದ ಶಾಕ್ …!

ಬೆಳಗಾವಿ PRAJAKIRAN.COM: ರಾಜ್ಯದ ಉಪಚುನಾವಣಾ ಕಣದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥೀಯಾಗಿ ಸ್ಪರ್ಧಿಸಿರುವ ಅನರ್ಹ ಶಾಸಕ ಮಹೇಶ ಕುಮಟಳ್ಳಿಗೆ ಸ್ವಗ್ರಾಮದಲ್ಲಿಯೇ ಮತದಾರರು ಬಹಿಷ್ಕಾರದ ಬೋರ್ಡಿಂಗ್ ಹಾಕಿ ಶಾಕ್ ನೀಡಿದ್ದಾರೆ.

ಹೌದು ಇದು ಅಚ್ಚರಿಯ ಸಂಗತಿಯಾದ್ರೂ ನಂಬಲೇಬೇಕಾದ ಕಟುಸತ್ಯ. ಬೆಳಗಾವಿ ಜಿಲ್ಲೆಯು ನೆರೆ ಹಾವಳಿಗೆ ತುತ್ತಾದ ಸಂದರ್ಭದಲ್ಲಿ ಅಥಣಿ ಕ್ಷೇತ್ರದ ಶಾಸಕರಾಗಿದ್ದ ಮಹೇಶ ಕುಮಟಳ್ಳಿಅವರು ಮುಂಬೈನಲ್ಲಿ ತಂಗಿದ್ದರು.

ನಾವು ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾಗ ಅವರಿಗೆ ನಮ್ಮ ನೆನಪು ಇರಲಿಲ್ಲ ಹೀಗಾಗಿ ನಾವು ನಮ್ಮ ಗ್ರಾಮದಲ್ಲಿ ಅನರ್ಹ ಶಾಸಕರಿಗೆ ಪ್ರವೇಶ ನಿಷೀದ್ಧಮಾಡಿದ್ದೇವೆ ಎಂದು ನಾಮಫಲಕ ಹಾಕಿದ್ದಾರೆ.

ಅಲ್ಲದೆ, ಇದು ಮಹಾನ್ ಸಂತನನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಅಥಣಿ ಶಿವಯೋಗಿ ಮಹಾಸ್ವಾಮಿಗಳ ತವರೂರು. ಹೀಗಾಗಿ ನಾವು ಇಲ್ಲಿ ಅನರ್ಹ ಶಾಸಕರ ಪ್ರವೇಶಕ್ಕೆ ನಿರಾಕರಿಸಿದ್ದೇವೆ ಎಂದು ನಾಮಫಲಕದಲ್ಲಿ ನಮೂದಿಸಿದ್ದಾರೆ.

ಅಥಣಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತೆಲಸಂಗ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಇದ್ದರೂ ಸಹ ಅಥಣಿ ಕ್ಷೇತ್ರದ ಮಾನ ಮರ್ಯಾದೆ ಹೋಗಿದೆ. ಅವರು ಮಾರಾಟ ಮಾಡಿಕೊಂಡಿರಬಹುದು.

ನಾವು ಮಾರಾಟವಾಗುವುದಿಲ್ಲ. ಇದರಿಂದ ನಮ್ಮ ಗ್ರಾಮದ ಮರ್ಯಾದೆ ಹೋಗಿದೆ ಎಂದು ಗ್ರಾಮಸ್ಥ ಶಿವು ಅವರು ಅಳಲುತೊಡಿಕೊಂಡಿದ್ದಾರೆ.

ಜೊತೆಗೆ ಗ್ರಾಮದಲ್ಲಿ ಸಂತೋಷ ಹೆಗಡೆ ಅವರ ಭಾವಚಿತ್ರ ಕೂಡ ಹಾಕಿ ಅನರ್ಹರ ಸೋಲಿಸಲು ಪಣತೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ರಾಜ್ಯದ ಜನತೆ ನಮಗೆ ಛೀಮಾರಿ ಹಾಕುತ್ತಿದ್ದಾರೆ. ಮಹೇಶ ಕುಮಟಳ್ಳಿ ಅವರ ಸ್ವಗ್ರಾಮದ ಜನತೆ ಮನೆ ಮಠ ಕಳೆದುಕೊಂಡಾಗ ಕುಮಟಳ್ಳಿ ಮುಂಬೈ ನಲ್ಲಿ ಮೋಜು ಮಸ್ತಿಯಲ್ಲಿದ್ದರು.

ಹೀಗಾಗಿ ಅವರಿಗೆ ನಮ್ಮ ಮತ ಕೇಳಲು ಯಾವ ಅರ್ಹತೆ ಇದೆ. ನಮ್ಮ ಗ್ರಾಮಕ್ಕೆ ಬರಲು ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಸುಪ್ರೀಂಕೋರ್ಟ್ ಕೂಡ ಅವರನ್ನು ಛೀಮಾರಿ ಹಾಕಿದೆ. ಅನರ್ಹ ಶಾಸಕರು ಎಂದು ಹೇಳಿದ್ದಾರೆ. ನಮ್ಮನ್ನು ನಾವು ಮಾರಿಕೊಳ್ಳಲು ಸಿದ್ದವಿಲ್ಲ. ಯಾರೇ ಬಂದರೆ ಏನೂ ಮಾಡಲ್ಲ ಎಂದು ಅನರ್ಹ ಶಾಸಕರಿಗೆ ಶಿವು ಬಿಸಿ ತಾಕಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *