ರಾಜ್ಯ

ಮಾರ್ಚ್ 21ರಿಂದ ಹತ್ತನೇ ತರಗತಿ ಪರೀಕ್ಷೆ ಆರಂಭ

ಬೆಂಗಳೂರು : ಮಾರ್ಚ್ 21ರಿಂದ ಎಪ್ರಿಲ್ 4ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.

ಗುರುವಾರ ಈ ಕುರಿತು ಅಂತಿಮ ವೇಳಾ ಪಟ್ಟಿ ಪ್ರಕಟಿಸಿದ್ದು, 2018-2019ನೇ ಶೈಕ್ಷಣಿಕ ಸಾಲಿನ ಎಸ್ಎಸ್ ಎಲ್ ಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿ ಈ ರೀತಿ ಇದೆ.

ಮಾ. 21ರಂದು ಪ್ರಥಮ ಭಾಷೆ ಕನ್ನಡ, ಮಾ. 23 ರಂದು ಅರ್ಥಶಾಸ್ತ್ರ, ಮಾ. 25 ರಂದು ಗಣಿತ, ಸಮಾಜ ಶಾಸ್ತ್ರ, ಮಾ. 27ರಂದು ದ್ವಿತೀಯ ಭಾಷೆ ಇಂಗ್ಲಿಷ್, ಮಾ. 29ರಂದು ಸಮಾಜ ವಿಜ್ಞಾನ, ಏ. 2ರಂದು ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಕೊನೆಯದಾಗಿ ಏ. 4ರಂದು ತೃತೀಯಭಾಷೆ ಹಿಂದಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದೆ.

ಹತ್ತನೇ ತರಗತಿಯ ಪರೀಕ್ಷಾ ವೇಳೆ ಪಟ್ಟಿ ಪ್ರಕಟವಾಗುತ್ತಿದ್ದಂತೆ ನಾಡಿನ ಕೋಟ್ಯಾಂತರ ಮಕ್ಕಳ ಹಾಗೂ ಪೋಷಕರ ಡಬ್ ಡಬ್ ಎನ್ನುವಂತೆ ಮಾಡಿದೆ.

Please follow and like us:

Leave a Reply

Your email address will not be published. Required fields are marked *