ರಾಜ್ಯ

ಎರಡು ಗುಂಪುಗಳ ವೈಷಮ್ಯದಿಂದಾಗಿ ಪ್ರಸಾದಕ್ಕೆ ವಿಷಪ್ರಾಸನ

ಚಾಮರಾಜನಗರ : ಹನೂರು ತಾಲೂಕಿನ ಸುಳವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಗೋಪುರ ಶಂಕು ಸಮಾರಂಭದಲ್ಲಿ ಪ್ರಸಾದ ಸ್ವೀಕರಿಸಿದ ಪರಿಣಾಮ ಹತ್ತು ಭಕ್ತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಎರಡು ಗುಂಪುಗಳ ವೈಷಮ್ಯದಿಂದಾಗಿ ಪ್ರಸಾದಕ್ಕೆ ವಿಷ ಪ್ರಾಸನ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ ಅಲ್ಲಿಯ ಸ್ಥಳೀಯರು.

ಮಾರಮ್ಮ ದೇವಾಲಯ ದ ಟ್ರಸ್ಟಿನ ಸದಸ್ಯರ ನಡುವೆ ಎರಡು ಗುಂಪುಗಳಿದ್ದವು. ಒಂದು ಗುಂಪಿಗೆ ಗೋಪುರ ನಿರ್ಮಾಣ ಅಗತ್ಯವಿರಲಿಲ್ಲ. ಇದು ಅವರ ಪ್ರತಿಷ್ಟೆ ಹೆಚ್ಚು ಮಾಡುತ್ತದೆ ಎಂದು ಅಂದಾಜಿಸಿತ್ತು.

ಈ ಹಿನ್ನೆಲೆಯಲ್ಲಿ ಅವರು ಗೋಪುರ ಶಂಕು ಸ್ಥಾಪನೆ ಪ್ರಸಾದ ವಿತರಣೆ ಯಲ್ಲಿ ವಿಷ ಪ್ರಾಸನ ಮಾಡಿರುವ ಸಾಧ್ಯತೆ ಇದೆ ಎಂದು ಅನುಮಾನ ಬಲಗೊಂಡಿದೆ.

ಕೆ. ಆರ್. ಪುರ ಆಸ್ಪತ್ರೆ ವೈದ್ಯರು ಇದು ಆಹಾರ ದಲ್ಲಿ ಕೀಟ ನಾಶಕ ಮಿಶ್ರಣ ಮಾಡಿ ಪ್ರಸಾದ ರೂಪದಲ್ಲಿ ವಿತರಣೆ ಮಾಡುವ ಮೂಲಕ ತಮ್ಮ ದ್ವೇಷ ಸಾಧಿಸಿದ್ದಾರೆ ಎಂದು ಅಂದಾಜಿಸಿದ್ದಾರೆ.

ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಚಿನ್ನಬ್ಬಿ ಹಾಗೂ ಮಹದೇವ್ ಎಂಬುವರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ.

ಇದೇ ವೇಳೆ ರೋಗಿಗಳ ನೋಡಲು ಬಂದಿದ್ದ ಸಂಬಂದಿಕರು ಮತ್ತು ಸಾವ೯ಜನಿಕರ ಮೇಲೆ ಪೊಲೀಸ್ ರಿಂದ ಲಾಠಿ ಚಾಚ್ ೯ ಮಾಡಿ ಪರಿಸ್ಥಿತಿ ನಿಯಂತ್ರಣ ಸಾಧಿಸಲು ಹೆಣಗಾಡುತ್ತಿದ್ದಾರೆ.

ಇದರಿಂದಾಗಿ ಸಾವ೯ಜನಿಕರು ಮತ್ತು ಪೋಲಿಸರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸ್ ರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಸಾವ೯ಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸಾವಿನ ಸಂಖ್ಯೆ ಎರುತ್ತಿದ್ದು ಕಿಚಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದ ಸ್ವೀಕರಿಸಿದ ೯೦ ಭಕ್ತರು ಅಸ್ವಸ್ಥಗೊಂಡಿದ್ದರು. ಇನ್ನೂ ಹಲವರ ಪರಿಸ್ಥಿತಿ ಗಂಭೀರ ವಾಗಿದೆ.

Please follow and like us:

Leave a Reply

Your email address will not be published. Required fields are marked *