ಕಲಬುರಗಿ prajakiran.com : ತಾಲ್ಲೂಕಿನ ಸಿಂದಗಿ (ಬಿ) ಗ್ರಾಮದ ಸೀಮೆಯಲ್ಲಿ ಪ್ರಾಣಿಗಳನ್ನು ಬೇಟೆ ಆಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಇದನ್ನು ಗಮನಿದ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ ( ಕೇಶವ ) ಮೋಟಗಿ ಯವರು ಈ ವಿಷಯ ವನ್ನು ಕಲಬುರ್ಗಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸುನಿಲ್ ಕುಮಾರ್ ಚವ್ಹಾಣ್ ಅವರ ಗಮನಕ್ಕೆ ತಂದರು.
ಈ ಹಿನ್ನೆಲೆಯಲ್ಲಿ ಸದರಿ ರವರ ಮಾರ್ಗದರ್ಶನದಲ್ಲಿ ಕಾಶಿನಾಥ್ ಉಪ ವಲಯ ಅರಣ್ಯಾಧಿಕಾರಿ ಕಲಬುರ್ಗಿ ಶಾಖೆ ಹಾಗೂ ಹೈದರ್ ಅಲಿ ಅರಣ್ಯ ರಕ್ಷಕರು, ಚೇತನ್ ,ರುಪೇಶ, ಹನುಮಂತ್, ಅರಣ್ಯ ವಿಕ್ಷಕರು ಮತ್ತು ದಯಾನಂದ ವಾಹನ ಚಾಲಕ ಇವರು ದಾಳಿ ನಡೆಸಿ ಶರಣ ಹಾಗೂ ಈರಣ್ಣ ಅವರನ್ನು ಬಂಧಿಸಿದ್ದಾರೆ.
ಇವರ ವಿರುದ್ದ ವನ್ಯ ಜೀವಿ ಕಾಯಿದೆ 1972 ರ ಪ್ರಕಾರ ಅರಣ್ಯ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.