ರಾಜ್ಯ

ಕೂಡ್ಲಿಗಿ ಬಳಿ ಭೀಕರ ಅಪಘಾತ : ಒಂದೇ ಕುಟುಂಬದ ಮೂವರ ದುರ್ಮರಣ

ಬಳ್ಳಾರಿ : ಮೈಸೂರಿನಿಂದ ಪ್ರವಾಸ ಮುಗಿಸಿಕೊಂಡು ವಿಜಯಪುರ ಜಿಲ್ಲೆ ಚಿಕ್ಕ ಆಸಂಗಿ ಗ್ರಾಮಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ಟ್ರ್ಯಾಕ್ಸ್ ಗೆ ಲಾರಿಯೊಂದು ಮುಖಾ-ಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ದುರ್ಮರಣಕ್ಕೀಡಾಗಿದ್ದು 9 ಜನರಿಗೆ ಗಾಯಗೊಂಡಿದ್ದಾರೆ. ಈ ಘಟನೆ ಬುಧವಾರ ನಸುಕಿನ ಜಾವ ಕೂಡ್ಲಿಗಿ ಸಮೀಪದ ಶಿವಪುರ ರಸ್ತೆ ಹೈವೆ 50ರಲ್ಲಿ ಸಂಭವಿಸಿದೆ.

ಮೃತರನ್ನು ಬೀಜಿನ್ (43), ಶಬನಾ (22) ಹಾಗೂ ರಬೀಯಾ (41) ಎಂದು ಗುರುತಿಸಲಾಗಿದೆ. ಇವರು ತೀವ್ರ ಗಾಯಗೊಂಡು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಉಳಿದಂತೆ ಮಹಾರಾಷ್ಟ್ರದ ಪುಣೆಯ ಮಹಮ್ಮದ್ ನಂದ್ಯಾಲ್ (10), ಅಫಾ ನಂದ್ಯಾಲ್ (10), ಗಫೂರ್ ನಂದ್ಯಾಲ್ (14), ಮುಸ್ಕಾನ್ ನಂದ್ಯಾಲ್ (13) ನಾಸೀರ್ (68) ಅವರಿಗೆ ತೀವ್ರ ಗಾಯಗಳಾಗಿದ್ದು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿದೆ.

ಮೈಸೂರು ಪ್ರವಾಸ ಮುಗಿಸಿ ಕೆಎ 28, ಎಂ.3657 ನೆದ್ದರಲ್ಲಿ ಹೋಗಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಚಿಕ್ಕ ಆಸಂಗಿ ಗ್ರಾಮಕ್ಕೆ ಮರಳುತಿದ್ದರು.

ಇಂದು ನಸುಕಿನ ಜಾವ ಎದುರಿಗೆ ಬರುತ್ತಿದ್ದ ಈಚರ್ ಲಾರಿಗೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೆ ಟ್ರ್ಯಾಕ್ಸ್ ನ ಚಾಲಕನಾಗಿದ್ದ ಮಸ್ತಾನ್ ಸಾಬ್ ನ ಪತ್ನಿ ಬೀಬಿನ್ (43) ಹಾಗೂ ದಾಂಡೇಕರ್ ಫೂಲ್ ಪುಣೆಯ ರಬೀಯಾ ಮುಜಾವರ್ (41) ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಮೃತ ಬೀಬಿನ್ ಮಸ್ತಾನ್ ಸಾಬ್ ನ ಮಗಳಾದ ಶಬನಾ (20) ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆತರುತ್ತಿದ್ದಂತೆ ಮೃತ ಪಟ್ಟಳು. ಈ ಮೂವರ ಶವಗಳನ್ನು ಕೂಡ್ಲಿಗಿ ಶವಗಾರದಲ್ಲಿ ಇರಿಸಲಾಗಿದೆ.

ಅಪಘಾತದ ಸುದ್ದಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ನೂತನ ಎ.ಎಸ್.ಪಿ ಲಾವಣ್ಯ, ಕೂಡ್ಲಿಗಿ ಡಿವೈಎಸ್ಪಿ ಬಸವೇಶ್ವರ ಹಾಗೂ ಸಂಡೂರು ಸಿಪಿಐ ನಿಕ್ಕಿಂ, ಕೂಡ್ಲಿಗಿ ಸಿಪಿಐ ನಹೀಂ ಅಹ್ಮದ್ ಹಾಗೂ ಎ.ಎಸ್.ಐ ಮಾರಪ್ಪ ಅವರು ಭೇಟಿ ನೀಡಿ ಸಿಬ್ಬಂದಿಗಳನ್ನು ಕರೆಸಿಕೊಂಡು ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಗಾಯಾಳುಗಳ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *