ಅಂತಾರಾಷ್ಟ್ರೀಯ

ಕಳೆದ 24 ಗಂಟೆಗಳಲ್ಲಿ 549 ಕೇಸ್ ಪತ್ತೆ, 17 ಜನ ಸಾವು

ನವದೆಹಲಿ prajakiran.com : ದೇಶದಲ್ಲಡೆ ಕಳೆದ 24 ಗಂಟೆಗಳಲ್ಲಿ 549ಕೇಸ್ ಪತ್ತೆಯಾಗಿದ್ದು, ಆ ಮೂಲಕ ದೇಶದಲ್ಲೆಡೆ ಒಟ್ಟು ಪ್ರಕರಣಗಳ ಸಂಖ್ಯೆ 5734ಕ್ಕೆ ಏರಿಕೆಯಾದಂತಾಗಿದೆ.

ಈವರೆಗೆ ದೇಶದಲ್ಲಿ 166 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಕಳೇದ 24 ಗಂಟೆಗಳಲ್ಲಿಯೇ 17 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ತಿಳಿಸಿದ್ದಾರೆ.

ಅವರು ಗುರುವಾರ ಸಂಜೆ ಕರೋನಾ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೇಂದ್ರ ಸರಕಾರದಿಂದಲೇ 9 ರಾಜ್ಯಗಳಿಗೆ ವೈದ್ಯರನ್ನು ರವಾನಿಸಲಾಗುತ್ತಿದೆ. ಈಗಾಗಲೇ 5 ಸಾವಿರ ಬೋಗಿಗಳನ್ನು ಐಸೋಲೇಶನ್ ವಾರ್ಡ್ ಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ವಿವರಿಸಿದರು.

ಅಲ್ಲದೆ, 49 ಸಾವಿರ ವೆಂಟಿಲೇಟರ್ ಖರೀದಿಗೆ ಸಿದ್ದತೆ ನಡೆಸಲಾಗಿದ್ದು, 1.5 ಕೋಟಿ ಪಿಪಿಇ ಕಿಟ್ ಖರೀದಿಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *