ಧಾರವಾಡ : ಬಜರಂಗದಳ ವತಿಯಿಂದ ಹುಬ್ಬಳ್ಳಿ ಯಲ್ಲಿ ನಡೆದ ಜನಾಗ್ರಹ ಸಭೆ ಕಾರ್ಯಕ್ರಮ ಕ್ಕೆ ಧಾರವಾಡದ R.L.S ಮೈದಾನದಿಂದ ಬೃಹತ್ ಬೈಕ ಜಾಥಾ ಸಂಚರಿಸಿತು.
ಧಾರವಾಡ ದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು, ರಾಮನಾಮ ಜಪ ಮುಗಿಲು ಮುಟ್ಟಿತ್ತು. ಎಲ್ಲಡೆ ಯುವ ಪಡೆ ಕೇಸರಿ ಧ್ವಜ ಮೊಳಗುವಂತೆ ಮಾಡಿತ್ತು.
ಇದರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ನೂರಾರು ಜನರು ಕೂಡ ತಲೆ ಕೇಸರಿ ತಿಲಕ ಧರಿಸಿ ಕೊರಳಿಗೆ ಕೇಸರಿ ಶಾಲು ಧರಿಸಿ ಗಮನ ಸೆಳೆದದ್ದು ವಿಶೇಷವಾಗಿತ್ತು.
ಈ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷದ್ ಉತ್ತರ ಪ್ರಾಂತ ಅಧ್ಯಕ್ಷರಾದ ಡಾ. ಎಸ್. ಆರ್ ರಾಮನಗೌಡರ ಚಾಲನೆ ನೀಡಿದರು.
ಈ ವೇಳೆ ಎಲ್ಲ ಹಿಂದೂ ಸಂಘಟನೆಯ ಕಾರ್ಯಕರ್ತರು ರಾಮಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಿ ಜಯ ಘೋಷ ಮೊಳಗಿಸಿದರು.
ಈ ಕಾರ್ಯಕ್ರಮ ದಲ್ಲಿ ಬಜರಂಗದಳ ಹುಬ್ಬಳ್ಳಿ ಮಹಾನಗರ ಧಾರವಾಡ ಜಿಲ್ಲಾ ಸಂಚಾಲಕರಾದ ಶಿವಾನಂದ ಸತ್ತಿಗೇರಿ, ಬಜರಂಗದಳ ಜಿಲ್ಲಾ ಸಹ ಸಂಚಾಲಕರಾದ ಅಕ್ಷಯ ಕುಲಕರ್ಣಿ, ಬಜರಂಗದಳ ಅಖಂಡ ಗ್ರಾಮೀಣ ಸಂಚಾಲಕರಾದ ಮಹಾದೇವ ಕೋರಿ, ಬಜರಂಗದಳ ಧಾರವಾಡ ನಗರ ಸಂಚಾಲಕರಾದ ಪ್ರೀತೇಶ ಜಾಧವ್, ಬಜರಂಗದಳ ನಗರ ಸಹ ಸಂಚಾಲಕರಾದ ಸಿದ್ದು ಹಿರೇಮಠ, ಬಿಜೆಪಿ ಧಾರವಾಡ ಶಾಸಕರಾದ ಅರವಿಂದ ಬೆಲ್ಲದ , ಶಕ್ತಿ ಹಿರೇಮಠ ಹಾಗೂ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು