ಬೆಂಗಳೂರು : ಕಳೇದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್ ಶೋ ಈ ಬಾರಿ ಲಕ್ನೋ ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
2006ರಿಂದ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿದ್ದ ಈ ಏರ್ ಶೋ ಈವರೆಗೆ 12 ಬಾರಿ ಬೆಂಗಳೂರಿನಲ್ಲಿ ನಡೆದಿದೆ ಇದರಿಂದಾಗಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿತ್ತು. ಅಲ್ಲದೆ, ಈ ಏರ್ ಶೋ ನೋಡಲು ದೇಶ-ವಿದೇಶದಿಂದ ಕೂಡ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ.
ಆದರೆ ಈ ಬಾರಿ ಅದನ್ನು ಲಕ್ನೋಗೆ ಶಿಫ್ಟ್ ರಕ್ಷಣಾ ಇಲಾಖೆ ಚಿಂತನೆ ನಡೆಸಿದೆ. ಇದಕ್ಕೆ ಪ್ರಮುಖ ಕಾರಣ ಯಲಹಂಕದಲ್ಲಿ ಸಾಕಷ್ಟು ಬಹುಮಹಡಿ ಕಟ್ಟಡಗಳು ತೆಲೆ ಎತ್ತಿವೆ. ಅಲ್ಲದೆ, ಅಲ್ಲಿಗೆ ಹರಿದು ಬರುವ ಜನರಿಗೆ ಕುಳಿತುಕೊಳ್ಳಲು ಸಾಕಷ್ಟು ಆಸನದ ವ್ಯವಸ್ಥೆ ಕೂಡ ಕಡಿಮೆ. ಇದರೊಂದಿಗೆ ರಸ್ತೆಯಲ್ಲಿ ಸರಳವಾಗಿ ಹೋಗಿ ಬರಲು ಸಾಧ್ಯವಾಗಲ್ಲ. ಟ್ರಾಫೀಕ್ ಕಿರಿಕಿರಿಯಿಂದ ಕೂಡ ಅದನ್ನು ಅಲ್ಲಿಗೆ ಶಿಫ್ಟ್ ಮಾಡಬೇಕೆಂಬ ಬೇಡಿಕೆಯಿದೆ.
ಇದರೊಂದಿಗೆ ಎರ್ ಶೋ ಗೋವಾಕ್ಕೆ ಶಿಫ್ಟ್ ಮಾಡಬೇಕೆಂಬ ಬೇಡಿಕೆ ಕೂಡ ಬಂದಿದೆ. ಹೀಗಾಗಿ ಜನರನ್ನು ಸೆಳೆಯಲು ಎಲ್ಲಿ ನಡೆಸಬೇಕೆಂಬ ಚಿಂತನೆ ನಡೆದಿದೆ. ಆದರೆ ಕೇಂದ್ರ ರಕ್ಷಣಾ ಇಲಾಖೆ ಈವರೆಗೆ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಅಮೆರಿಕಾ : ಹಾಲುಗಲ್ಲದ ಕಂದಮ್ಮನಿಗೆ ಹಾಲು ಉಣಿಸುತ್ತಾ ಕ್ಯಾಟ್ ವಾಕ್ ಮಾಡುವ ಮೂಲಕ ಮಾಡೆಲ್ ಒಬ್ಬರು ವಿಶ್ವದ ಗಮನ ಸೆಳೆದಿದ್ದಾರೆ. ಹೌದು ಇದು ವಿಚಿತ್ರವಾದರೂ ನಂಬಲೇಬೇಕಾದ ಸತ್ಯ. ಇನ್ನೂ ಜಗತ್ತನ್ನೇ ನೋಡದ ತನ್ನ ಐದು ತಿಂಗಳ ಮಗಳಿಗೆ ಎದೆ ಹಾಲುಣಿಸುತ್ತಾ ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಮಾಡೆಲ್ ಹೆಸರು ಮಾರ್ಟಿನ್. ಮುದ್ದಾದ ಕಂದಮ್ಮನಿಗೆ ರೆಡ್ ಕಾರ್ಪೆಟ್ ಮೇಲೆಯೇ ಹಾಲು ಉಣಿಸುವ ಮೂಲಕ ಮಾರಾ ಮಾರ್ಟಿನ್ ವಿಭಿನ್ನವಾಗಿ ರಾಂಪ್ ವಾಕ್ ಮಾಡಿ ಎಲ್ಲರನ್ನು ನಿಬ್ಬರಗಾಗಿಸಿದ್ದಾರೆ. ಅವರ ಈ ಹೊಸ ಕಲ್ಪನೆಗೆ […]
ಪಾಕಿಸ್ತಾನ : ಹಿರಿಯ ಕ್ರಿಕೆಟ್ ಪಟು ಹಾಗೂ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಅಧ್ಯಕ್ಷರು ಆಗಿರುವ ಇಮ್ರಾನ್ ಖಾನ್ ಅವರು ಶನಿವಾರ ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು, ಪಾಕಿಸ್ತಾನದ ಅಧ್ಯಕ್ಷೀಯ ಕಚೇರಿ ಇಸ್ಲಾಂಬಾದ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಇದಕ್ಕೆ ಪಂಜಾಬ್ ಸರಕಾರದ ಸಚಿವ ಹಾಗೂ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಅಧ್ಯಕ್ಷ ಮಸೂದ್ ಖಾನ್ , ಪಾಕ್ ಸೇನೆ ಅಧ್ಯಕ್ಷ […]
ಇಸ್ಲಾಮಾಬಾದ್ : ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರ್ ವಾಜಪೇಯಿ ಅವರ ನಿಧನಕ್ಕೆ ಪಾಕಿಸ್ತಾನದ ನಿಯೋಜಿತ ಪ್ರಧಾನಮಂತ್ರಿ ಇಮ್ರಾನ್ ಖಾನ್ ಕಂಬನಿ ಮಿಡಿದಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಶಾಂತಿ ನೆಲೆಸಲು ನಿರಂತರವಾಗಿ ಶ್ರಮಿಸಿದ ಧೀಮಂತ ನಾಯಕ ಅಗಲಿಕೆ ದುಃಖ ತಂದಿದೆ ಎಂದು ನುಡಿ ನಮನ ಸಲ್ಲಿಸಿದ್ದಾರೆ. ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಅಧ್ಯಕ್ಷರು ಆಗಿರುವ ಇಮ್ರಾನ್ ಖಾನ್, ಅವರೊಬ್ಬ ಮೇರು ನಾಯಕ ಎಂದು ಗುಣಗಾನ ಮಾಡಿದ್ದಾರೆ. ಅಲ್ಲದೆ, ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದಾಗಿನಿಂದಲೂ ಪಾಕಿಸ್ತಾನ- ಭಾರತದ ನಡುವೆ […]