ಅಂತಾರಾಷ್ಟ್ರೀಯ

ಮಗುವಿಗೆ ಹಾಲುಣಿಸುತ್ತಾ ಕ್ಯಾಟ್ ವಾಕ್ ಮಾಡಿದ ಮಾಡೆಲ್ !

ಅಮೆರಿಕಾ : ಹಾಲುಗಲ್ಲದ ಕಂದಮ್ಮನಿಗೆ ಹಾಲು ಉಣಿಸುತ್ತಾ ಕ್ಯಾಟ್​ ವಾಕ್ ಮಾಡುವ ಮೂಲಕ ಮಾಡೆಲ್ ಒಬ್ಬರು ವಿಶ್ವದ ಗಮನ ಸೆಳೆದಿದ್ದಾರೆ.

ಹೌದು ಇದು ವಿಚಿತ್ರವಾದರೂ ನಂಬಲೇಬೇಕಾದ ಸತ್ಯ. ಇನ್ನೂ ಜಗತ್ತನ್ನೇ ನೋಡದ ತನ್ನ ಐದು ತಿಂಗಳ ಮಗಳಿಗೆ ಎದೆ ಹಾಲುಣಿಸುತ್ತಾ ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಮಾಡೆಲ್ ಹೆಸರು ಮಾರ್ಟಿನ್.

ಮುದ್ದಾದ ಕಂದಮ್ಮನಿಗೆ ರೆಡ್​ ಕಾರ್ಪೆಟ್​ ಮೇಲೆಯೇ ಹಾಲು ಉಣಿಸುವ ಮೂಲಕ ಮಾರಾ ಮಾರ್ಟಿನ್ ವಿಭಿನ್ನವಾಗಿ ರಾಂಪ್ ವಾಕ್ ಮಾಡಿ ಎಲ್ಲರನ್ನು ನಿಬ್ಬರಗಾಗಿಸಿದ್ದಾರೆ. ಅವರ ಈ ಹೊಸ ಕಲ್ಪನೆಗೆ ಇಡೀ ಜಗತ್ತೇ ಬೆರಗಾಗಿದ್ದು, ಈಕೆಯ ಈ ಸಾಹಸಕ್ಕೆ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಟದ ಉಡುಪುಅಥವಾ ಈಜು ಉಡುಗೆ ಧರಿಸಿ ನಿಯತಕಾಲಿಕೆ ನಡೆಸಿದ ಫ್ಯಾಶನ್​ ಶೋನಲ್ಲಿ ಮಾರ್ಟಿನ್ ಈ ಗೆಟ್ಅಪ್ ನಲ್ಲಿ ಭಾಗವಹಿಸಿದ್ದರು. ಅಮೆರಿಕನ್ ಮೂಲದ ಮಾರ್ಟಿನ್ ಎಲ್ಲರಿಗಿಂತ ವಿಭಿನ್ನ ಹಾಗೂ ವೈಶಿಷ್ಟವಾಗಿ ಕಾಣಲು ಈ ರೀತಿ ಹೆಜ್ಜೆ ಹಾಕಿ ಸುದ್ದಿಯಾಗಿದ್ದಾಳೆ.

ವಿದೇಶಗಳಲ್ಲಿ ಪಬ್ಲಿಕ್​ನಲ್ಲಿಯೇ ಮೊಲೆ ಹಾಲು ಉಣಿಸುವುದು ಹೊಸತೇನಲ್ಲ. ಆದರೆ, ಈವರೆಗೂ ಮಾಡೆಲ್ ಗಳು ಈ ರೀತಿ ಫ್ಯಾಶನ್ ಶೋಗಳಲ್ಲಿ ಭಾಗವಹಿಸಿರಲಿಲ್ಲ. ಮಾರ್ಟಿನ್ ಅವರು ಈ ಹೊಸ ಕಲ್ಪನೆಗೆ ಬೀಜ ಬಿತ್ತುವ ಮೂಲಕ ತಾಯಂದಿರು ಎಲ್ಲಿ ಬೇಕಾದಲ್ಲಿ ತಮ್ಮ ಮಕ್ಕಳಿಗೆ ಹಾಲು ಉಣಿಸಿ ಅವರ ಹೊಟ್ಟೆಯನ್ನು ತಣ್ಣಗಾಗಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾಳೆ ಎಂದರೆ ತಪ್ಪಾಗಲಾರದು.

Please follow and like us:

Leave a Reply

Your email address will not be published. Required fields are marked *