ಧಾರವಾಡ: ಯಾರು ವಾಸಿಸದ ಮನೆಗೆ ಕಳ್ಳನೊಬ್ಬ ನುಗ್ಗಿ ಮನೆಯಲ್ಲಿದ್ದ ಸಾಮಗ್ರಿಗಳನ್ನ ಚೆಲ್ಲಾಪಿಲ್ಲಿ ಮಾಡಿ ಏನು ಸಿಗದೆ ಬರಿಗೈಯಲ್ಲಿ ವಾಪಸ್ಸು ಆದ ಘಟನೆ ಧಾರವಾಡದ ಶಿವಪುರ ಕಾಲೋನಿಯಲ್ಲಿ ನಡೆದಿದೆ.
ಶಿವಪುರ ಕಾಲೋನಿಯ ನಿವಾಸಿ ರುದ್ರಪ್ಪ ಹೆಬ್ಬಳ್ಳಿ ಎಂಬುವವರ ಮನೆಗೆ ನುಗ್ಗಿದ್ದ ಕಳ್ಳ ಮನೆಯಲ್ಲಿ ಏನು ಸಿಗದೇ ಕೆಲವು ಸಾಮಗ್ರಿಗಳನ್ನು ಗಂಟು ಮೂಟೆ ಕಟ್ಟಿ ಅಲ್ಲಿಯೇ ಬಿಸಾಡಿ ಬರಿಗೈಯಲ್ಲಿ ವಾಪಸ್ ಆಗಿದ್ದಾನೆ.
ಬೆಳಗಿನ ಜಾವ ಪಕ್ಕದ ಮನೆಯವರು ಕಳ್ಳತನವಾಗಿರುವ ಮಾಹಿತಿ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡದ ವಿದ್ಯಾಗಿರಿ ಪೊಲೀಸರು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.
ಆಂಧ್ರ : ಹೆಂಡತಿ ಮೇಲಿನ ದ್ವೇಷಕ್ಕೆ ತನ್ನ ಮೂರು ಮಕ್ಕಳನ್ನು ನದಿಗೆ ಎಸೆದೆ ಅಮಾನವೀಯ ಘಟನೆ ಆಂಧ್ರದ ಗಂಗಾಧರ ನೆಲ್ಲೂರು ನಲ್ಲಿ ನಡೆದಿದೆ. ಆರು ವರ್ಷದ ಮಗ ಸಂಜಯ, 2 ವರ್ಷದ ಮಗ ಪುನೀತ್ ಹಾಗೂ 10 ತಿಂಗಳ ಮಗುವನ್ನು ಪಾಪಿ ತಂದೆಯೇ ಅಮರಾವತಿ ನದಿಯಲ್ಲಿ ಎಸೆದು ಹೋಗಿದ್ದಾನೆ. ಪತ್ನಿ ತನ್ನ ಗಂಡನನ್ನು ವಿಚಾರಿಸಿದಾಗ ಈ ಸತ್ಯ ಹೊರಬಂದಿದೆ. ಆರೋಪಿ ಪತಿಯನ್ನು ಗಂಗನಪಲ್ಲಿ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದ್ದು, ನದಿಯಲ್ಲಿ ಮೂರು ಮಕ್ಕಳ ಶವ ಪತ್ತೆಯಾಗಿವೆ. ಈ […]
ಹಾಸನ: ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ತವರು ಜಿಲ್ಲೆ ಹಾಸನದಲ್ಲಿ ಸಾಲಬಾಧೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೊಣಿಸೋಮನಹಳ್ಳಿಯ ರಮೇಶಯ್ಯ(60) ಹಾಗೂ ಚನ್ನರಾಯಪಟ್ಟಣ ತಾಲೂಕಿನ ಮರವನಹಳ್ಳಿಯ ಗೌಡೇಗೌಡ(58) ಎಂಬ ರೈತರೇ ಮೃತ ರ್ದುದೈವಿಗಳು ರಮೇಶಯ್ಯ 5ಲಕ್ಷಕ್ಕೂ ಅಧಿಕ ಬ್ಯಾಂಕ್ ಹಾಗೂ ವಿವಿಧೆಡೆ ಕೈಸಾಲ ಮಾಡಿಕೊಂಡಿದ್ದ ಜೊತೆಗೆ ಒಡವೆಗಾಗಿ 80 ಸಾವಿರ ರೂಪಾಯಿಯಷ್ಟು ಸಾಲ ಮಾಡಿದ್ದ ಎಂದು ಕುಟುಂಬದವರು ಹಳೇಬಿಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ […]
ಧಾರವಾಡ : ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಅಬ್ದುಲ್ ದೇಸಾಯಿ ಮೇಲೆ ಕೆಲ ದುಷ್ಕರ್ಮಿಗಳು ನಿನ್ನೆ ರಾತ್ರಿ ಇಲ್ಲಿಯ ಕರ್ನಾಟಕ ಕಾಲೇಜ್ ಮುಂಭಾಗದಲ್ಲಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಹಲ್ಲೆಯಿಂದ ಪಾರಾಗಿರುವ ಅಬ್ದುಲ್ ತಮ್ಮ ಸ್ಕ್ರಾಪಿಯೋ ವಾಹನದಿಂದ ಅಲ್ಲಿಂದ ಹೋಗಲು ಪ್ರಯತ್ನಿಸಿದ್ದಾರೆ. ಆಗ ದುಷ್ಕರ್ಮಿಗಳು ವಾಹನದ ಮೇಲೆ ದಾಳಿ ಮಾಡಿದ್ದರಿಂದ ಸ್ಕ್ರಾಪಿಯೋ ವಾಹನದ ಗಾಜುಗಳು ಪುಡಿಪುಡಿಯಾಗಿವೆ. ಕೂಡಲೇ ಉಪನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿರುವ ಅಬ್ದುಲ್, ಇದು ರಾಜಕೀಯ […]