ಗದಗ : ಸಮರ್ಪಕ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಗ್ರಾಪಂ ಸದಸ್ಯರಿಗೆ ದಿಗ್ಬಂಧನ ವಿಧಿಸಿದ ಘಟನೆ ಗದಗ ಜಿಲ್ಲೆಯ ಲಕ್ಕಲಟ್ಟಿಯಲ್ಲಿ ನಡೆದಿದೆ.
ಗ್ರಾಮಸ್ಥರು ಕಳೆದ ಹಲವು ದಿನಗಳಿಂದ ಪರದಾಡುತ್ತಿದ್ದರೂ ಯಾರೊಬ್ಬರು ಸ್ಪಂದಿಸಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಈ ದಾರಿ ತುಳಿಯಬೇಕಾಗಿದೆ. ನಮಗೆ ಕುಡಿಯುವ ನೀರು ಒದಗಿಸುವರೆಗೆ ಅವರನ್ನು ಬಿಡುವ ಪ್ರಶ್ನೇಯೇ ಇಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಜಿಲ್ಲಾಡಳಿತ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಕಾದು ನೋಡಬೇಕಿದೆ.
ಧಾರವಾಡ : ಶಾಲಾ ಆವರಣದಲ್ಲಿ ವಯೋವೃದ್ದನೋಬ್ಬ 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಜು.೧೯ ರಂದು ಗಾಂಧಿನಗರದ ಖಾಸಗಿ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಚಿಕ್ಕ ಮಗುವನ್ನು ಪುಸಲಾಯಿಸಿ ಹತ್ತಿರ ಕರೆದುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಾಳಮಡ್ಡಿಯ ನಿವಾಸಿ ಮನೋಹರ ಕುಲಕರ್ಣಿ (೭೫)ಎಂಬಾತನೇ ಈ ದುಷ್ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದಾನೆ. ಈ ಕೃತ್ಯವೂ ಶಾಲಾ ಆವರಣದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಗು […]
ಬೆಂಗಳೂರು : ರಾಜ್ಯದ ಎಲ್ಲ ಸಚಿವರ ಖಾತೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಎಲ್ಲ ಖಾತೆಗಳು ಗೊಂದಲದ ಗೂಡಾಗಿವೆ. ಸರಕಾರ ಕೇವಲ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಅವರು ಬೆಂಗಳೂರು ನಗರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯ ಸರಕಾರದಲ್ಲಿ ದಿನನಿತ್ಯ ಒಂದಿಲ್ಲ ಹಗರಣಗಳು ನಡೆಯುತ್ತಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಅಧಿಕಾರ ಕಿತ್ತುಕೊಳ್ಳುವ ಕೆಲಸ ನಡೆದಿದೆ ಎಂದು ಗುಡುಗಿದರು. ಬೆಂಗಳೂರು ನಗರದಲ್ಲಿ ಜನತೆ […]
ಮಂಗಳೂರು : ಮಡಿಕೇರಿ-ಸುಳ್ಯ ರಸ್ತೆ ಕುಸಿತಗೊಂಡಿದೆ. ಅಲ್ಲಿ ರಸ್ತೆ ಇತ್ತು ಎಂಬ ಕುರುಹು ಕೂಡ ನಾಪತ್ತೇ ಆಗಿದೆ. ಇಲ್ಲಿ ರಸ್ತೆ ಇತ್ತು ಎಂಬುದು ಸಹ ಈಗ ಗೊತ್ತಾಗಲ್ಲ. ಭೂಮಿ ಕುಸಿತಗೊಂಡು ಅಲ್ಲೇಲ್ಲಾ ನೀರು ಹರಿಯುತ್ತಿದೆ. ಈ ರಸ್ತೆ ಸರಿಪಡಿಸಲು ಹಲವು ದಿನಗಳೇ ಬೇಕು. ಇದಲ್ಲದೆ, ಮಡಿಕೇರಿ ಮಂಗಳೂರು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಈ ರಸ್ತೆ ಸಂಚಾರ ಸುಗಮಗೊಳಿಸಲು ಕನಿಷ್ಟ ಒಂದು ತಿಂಗಳ ಕಾಲ ಬೇಕಾಗುತ್ತದೆ ಎಂದು ಅಲ್ಲಿಯ ಸಿಬ್ಭಂದಿ ತಿಳಿಸಿದ್ದಾರೆ. ಇದಲ್ಲದೆ, ಸಾಕಷ್ಟು ರಸ್ತೆ ಬಿರುಕು ಬಿಟ್ಟಿದ್ದು, […]