ಧಾರವಾಡ : ಮಹದಾಯಿ, ಕಳಸಾ - ಬಂಡೂರಿ ನ್ಯಾಯಾಧಿಕರಣದ ತೀರ್ಪು ಕರ್ನಾಟಕ ಪರವಾಗಿ ಬರಲೆಂದು ಪ್ರಾರ್ಥಿಸಿ ಮನಸೂರ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಶ್ರೀ ರೇವಣಸಿದ್ದೇಶ್ವರ ಕತೃ ಗದ್ದುಗಿಗೆ ಜಲಾಭಿಷೇಕ ವಿಶೇಷ ಪೂಜೆ ಮಾಡಲಾಯಿತು.
ಮಹದಾಯಿ, ಕಳಸಾ - ಬಂಡೂರಿ ಯೋಜನೆ ಅನುಷ್ಠಾನ ಹಾಗೂ ನ್ಯಾಯಾಧೀಕರಣದ ತೀರ್ಪು ನಮ್ಮ ಕರ್ನಾಟಕದ ಪರವಾಗಿ ಬರಲೆಂದು ಪ್ರಾರ್ಥೀಸಿ ಇಂದಿನಿಂದ ತೀರ್ಪು ಬರುವವರೆಗೂ ದಿನನಿತ್ಯ ಮನಸೂರ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಶ್ರೀ ರೇವಣಸಿದ್ದೇಶ್ವರ ಕತೃ ಗದ್ದುಗಿಗೆ ಪೀಠಾಧಿಪತಿ ಹಾಗೂ ಮಹದಾಯಿ ಕಳಸಾ - ಬಂಡೂರಿ ಹೋರಾಟಗಾರರಾದ ಪೂಜ್ಯಶ್ರೀ ಬಸವರಾಜ ದೇವರು ನೇತೃತ್ವದಲ್ಲಿ ಜಲಾಭಿಷೇಕ ವಿಶೇಷ ಪೂಜೆ ಧಾರ್ಮಿಕ ಆಚರಣೆಗಳು ಆರಂಭಗೊಂಡಿವೆ.
ರಾಜಕೀಯ ನಡವಳಿಕೆಗೆ ಆಕ್ರೋಶ:
ರಾಜಕೀಯ ಪಕ್ಷಗಳು ಮಹದಾಯಿ ಕಳಸಾ- ಬಂಡೂರಿ ಯೋಜನೆ ಅನುಷ್ಠಾನಕ್ಕೆ ಅಸಡ್ಡೆ ತೋರಿವೆ. ನಮ್ಮನ್ನಾಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದಿಶೆಯಲ್ಲಿ ಯಾವುದೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲಗೊಂಡಿವೆ ಅದರಲ್ಲೂ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ನಾಯಕರುಗಳಂತೂ ಅತ್ಯಂತ ಬೇಜವ್ದಾರಿಯ ಮನಸ್ಥಿತಿಯವರು ಇಂತವರಿಂದ ಅಭಿವೃದ್ಧಿ ಅಸಾಧ್ಯ. ನಮ್ಮ ಹಕ್ಕಿಗಾಗಿ ಒಗಟ್ಟಿನಿಂದ ಜನತೆ ಚಳುವಳಿ ಮಾಡಬೇಕಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
