ರಾಜ್ಯ

ರಾಹುಲ್‌ ಗಾಂಧಿಗೆ ಎಲ್ಲೆಲ್ಲೋ‌ ಕಣ್ಣು‌ ಹೊಡೆಯೋದು ರೂಢಿ

ಧಾರವಾಡ : ಕಾಂಗ್ರೆಸ್ ಅಧಿನಾಯಕ ರಾಹುಲ್‌ ಗಾಂಧಿಗೆ ಎಲ್ಲೆಲ್ಲೋ‌ ಕಣ್ಣು‌ ಹೊಡೆಯೋದು ರೂಢಿ ಆಗಿ ಬಿಟ್ಟಿದೆ. ಹೀಗಾಗಿ ಲೋಕಸಭೆಯಲ್ಲಿಯೂ ಅವರು ಕಣ್ಣು ಹೊಡೆದಿದ್ದಾರೆ ಎಂದು ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಅವರು ಭಾನುವಾರ ನಗರದಲ್ಲಿ ಧಾರವಾಡ ಗ್ರಾಮೀಣ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು.

ಆದರೆ ರಾಹುಲ್ ಗಾಂಧೀ ಯಾರಿಗೆ ಕಣ್ಣು ಹೊಡೆದಿದ್ದಾರೋ‌ ಯಾರಿಗೊತ್ತು ಎಂದು ಟೀಕಿಸಿದಅವರು ಅದನ್ನು ಅವರಿಗೆ ಕೇಳಬೇಕು. ರಾಹುಲ್ ಗಾಂಧಿ ಒಬ್ಬ ಬೇಜವಾಬ್ದಾರಿಯುತ ವ್ಯಕ್ತಿ ಎಂದು ಹರಿಹಾಯ್ದರು.

ಅದ್ಯಾರೋ ಸಿನಿಮಾ ಆ್ಯಕ್ಟರ್ ಕಣ್ಣು ಹೊಡಿಯೋ ಹಾಗೆ ಇವರು ಕಣ್ಣು ಹೊಡೆದದ್ದು ಒಂದು ದುರಂತ ಎಂದು ಬಣ್ಣಿಸಿದ ಸಂಸದ ಪ್ರಲ್ಹಾದ ಜೋಶಿ ರಾಜ್ಯ ಸರಕಾರದ ವಿರುದ್ದವೂ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಪ್ರತಿ ಜಿಲ್ಲೆಗೊಬ್ಬರು ಉಸ್ತುವಾರಿ ಸಚಿವರನ್ನು ನೇಮಿಸಲಾಗದ ಸಿಎಂ ರಾಜ್ಯದಲ್ಲಿದ್ದಾರೆ.ಜಿಲ್ಲೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ‌ ಕಾರ್ಯ ಮಾಡಿ ಅಂತಾ ಅಧಿಕಾರಿಗಳಿಗೆ ಹೇಳಲು ಜಿಲ್ಲೆಗೊಬ್ಬ ಸಚಿವನಿಲ್ಲದಂತಹ ವ್ಯವಸ್ಥೆ ಈ ರಾಜ್ಯದಲ್ಲಿ‌ದೆ ಎಂದ ಅವರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತುಂಬಿ ಅಂತಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹೇಳೊಕೆ ಒಬ್ಬೇ ಒಬ್ಬ ವ್ಯಕ್ತಿ ಇಲ್ಲದಂತಹ ಸ್ಥಿತಿ ಇಂದು ನಿರ್ಮಾಣ ಆಗಿದೆ. ರಾಜ್ಯದಲ್ಲಿ ‌ಹೆಸರಿಗೆ ಮಾತ್ರ ನಾಮಾಕೆವಾಸ್ತೆ ಸರ್ಕಾರ ಇದೆ ಎಂದು ಆರೋಪಿಸಿದರು.

Please follow and like us:

Leave a Reply

Your email address will not be published. Required fields are marked *