ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯಗೆ ಸೆಡ್ಡು ಹೊಡೆಯಬಲ್ಲ ಕುರುಬ ಸಮುದಾಯದ ಪ್ರಬಲ ಮುಖಂಡ ಹೆಚ್. ವಿಶ್ವನಾಥ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ.
ಭಾನುವಾರ ನಗರದ ಜೆಪಿಭವನದಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಇದನ್ನು ಅಧಿಕೃತವಾಗಿ ಘೋಷಿಸಿದರು.
ಹೆಚ್. ವಿಶ್ವನಾಥ ಮೈಸೂರು ಭಾಗದ ಪ್ರಬಲ ನಾಯಕರಲ್ಲಿ ಒಬ್ಬರಾಗಿದ್ದು, ಕಳೆದ ವಿಧಾನ ಸಭಾ ಚುನಾವಣೆಗೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸೆಟೆದೆದ್ದು, ಕಾಂಗ್ರೆಸ್ ನಿಂದ ಹೊರಬಂದಿದ್ದರು. ಅಲ್ಲದೆ, ಹುಣಸೂರು ಕ್ಷೇತ್ರ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿರುವ ಅವರು ಇತ್ತೀಚೆಗೆಷ್ಟೇ ಸಚಿವ ಸ್ಥಾನದಿಂದ ವಂಚಿತರಾಗಿದ್ದರು.
ಈ ಹಿನ್ನಲೆಯಲ್ಲಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಹೆಚ್ಚಿನ ಹೊರೆ ಹೊರಿಸಿದಂತಾಗಿದೆ.ಈ ಸಭೆಯಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ಸೇರಿದಂತೆ ಅನೇಕ ಸಚಿವರು ಉಪಸ್ಥಿತರಿದ್ದರು.
ಕಳೆದ ಹಲವು ದಿನಗಳಿಂದ ಹೆಚ್. ವಿಶ್ವನಾಥ ಹೆಸರು ಕೇಳಿಬರುತ್ತಿತ್ತು.ಕೊನೆಗೂ ನಿರೀಕ್ಷೆಯಂತೆ ಈ ಘೋಷಣೆ ಹೊರಬಿದ್ದಿದ್ದು, ಇದೀಗ ಜೆಡಿಎಸ್ ಪಾಳೇಯದಲ್ಲಿ ಇನ್ನಷ್ಟು ಹುರುಪು ಮೂಡಲಿದೆಯೇ ಎಂಬುದು ಕಾದು ನೋಡಬೇಕಿದೆ.
ಬೆಂಗಳೂರು : ಕೊಡಗು ಸೇರಿದಂತೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಸಂಭವಿಸಿರುವ ಅಪಾರ ಹಾನಿಗೆ ನೆರವು ನೀಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆನ್ ಲೈನ್ ಮೂಲಕವೂ ಸಹಾಯಧನ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ರಾಜ್ಯ ಸರಕಾರ ಹಣವನ್ನು ಚೆಕ್ ಇಲ್ಲವೇ ಡಿಡಿ ಮುಖಾಂತರ ಪಾವತಿಸಲು ಅವರು ಕೋರಿದ್ದರು. ಆದರೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಲ್ಲದೆ, ಇವೆರಡು ಇದೀಗ ಔಟ್ ದೇಟೇಡ್ ಆಗಿವೆ. ಅವುಗಳನ್ನು ಬದಲಿಸಿ, ಆನ್ […]
ಕೊಡಗು : ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಶನಿವಾರ ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲನೆ ನಡೆಸಿದರು. ಅಲ್ಲಿಯ ಪರಿಸ್ತೀತಿ ಕಂಡು ದಿಗ್ಭಮ್ರೆ ವ್ಯಕ್ತಪಡಿಸಿದ ಅವರು ನನ್ನ ಮೈ ಜುಂ ಎನಿಸುತ್ತಿದೆ. ಜನಸಾಮಾನ್ಯರ ಸಂಕಷ್ಟವನ್ನು ಕಣ್ಣಾರೆ ಕಂಡು ಆತಂಕ ಹಾಗೂ ತೀವ್ರ ಕಳವಳ ವ್ಯಕ್ತಪಡಿಸಿದರು. ಮುಕ್ಕೋಡ್ಡು ಸಮೀಪದ ಇಕ್ಲೋಡ್ಲು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಾಯದಲ್ಲಿ ಸಿಲುಕಿರುವ ಎಲ್ಲರಿಗೂ ರಕ್ಷಣೆ ನೀಡ್ತಿವಿ,. ಕೇಂದ್ರದಿಂದ ಅಗತ್ಯ ನೆರವು ನೀಡಲಾಗುವುದು. ಮಳೆ […]
ಕೊಡಗು : ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೊಡಗು ಜಿಲ್ಲೆಯ ಗ್ರಾಮವೊಂದು ಸಂಪೂರ್ಣ ನಾಪತ್ತೆಯಾಗಿ ಹೋಗಿದೆ. ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಸತ್ಯ. ವಿರಾಟಪೇಟೆ ತಾಲೂಕಿನ ಕಾಂಡನಪಲ್ಲಿ ಗ್ರಾಮ ಭೂ ಕುಸಿತ ಅಕ್ಷರಶಃ ಮುಳುಗಿ ಹೋಗಿದೆ. ಅಲ್ಲಿ ಒಂದು ಗ್ರಾಮವಿತ್ತು ಎಂಬುದು ಕೂಡ ಊಹಿಸಲು ಆಗದಷ್ಟು ಮಣ್ಣು ಆ ಸ್ಥಳದಲ್ಲಿ ಆವರಿಸಿದ್ದರಿಂದ ಗ್ರಾಮವೇ ನಾಪತ್ತೆಯಾಗಿದೆ. ಇದನ್ನು ನೋಡಿದ ಜನತೆಯೇ ಬೆಚ್ಚಿ ಬಿದ್ದಿದ್ದು, ಕಂಗಲಾಗಿ ಹೋಗಿದ್ದಾರೆ. ಮುಂದೇನು ಎಂಬುದು ದಿಕ್ಕು ತೋಚದಂತಾಗಿದೆ. ಈಗ್ರಾಮದಲ್ಲಿ ಅಂದಾಜು […]