ಬೆಂಗಳೂರು : ಮಹಿಳಾ ಟೆಕ್ಕಿ ಜೊತೆಗೆ ಕಾರ್ ಚಾಲಕನೊಬ್ಬ ಅಸಭ್ಯ ವರ್ತನೆ ತೋರಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆ. 23ರಂದು ಈ ದುಷ್ಕೃತ್ಯ ನಡೆದಿದ್ದು, ಜೆಪಿ ನಗರದಿಂದ ಕಂಪನಿಗೆ ಹೋಗುವಾಗ ವಿಧಾನಸೌಧ ಬಳಿಯ ಸಿಗ್ನಲ್ ಬಳಿ ಕಾರ್ ನಿಂತಿದ್ದಾಗ ಕಾರ್ ಚಾಲಕ ಮಹಿಳಾ ಟೆಕ್ಕಿಗೆ ಅಶ್ಲೀಲ ವಿಡಿಯೋ ತೋರಿಸಿದ್ದಾನೆ.
ಈ ಘಟನೆ ನಡೆದ ತಕ್ಷಣ ಮಹಿಳಾ ಟೆಕ್ಕಿ ಕಾರ್ ಚಾಲಕನ ವಿರುದ್ದ ಈ ಬಗ್ಗೆ ಓಲಾ ಕಸ್ಟಮರ್ ಕೇರ್ ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಉಡಾಫೆ ಉತ್ತರ ನೀಡಿ ಕೈತೊಳೆದುಕೊಂಡಿದೆ.
ಈ ಹಿನ್ನಲೆಯಲ್ಲಿ ಮಹಿಳಾ ಟೆಕ್ಕಿ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕಾರ್ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಧಾರವಾಡ: ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಕಳೆದ ಮಾ.13 ರಂದು ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಸೋಮವಾರ ಬಂಧಿಸಿದ್ದಾರೆ. ಬಸಪ್ಪ ಚನ್ನಬಸಪ್ಪ ಮಾಟರ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ತನ್ನ ಪತ್ನಿ ಲಲಿತಾ ಖರ್ಚಿಗೆ ಹಣ ನೀಡಲಿಲ್ಲ ಎಂಬ ಕಾರಣದಿಂದ ಆಕೆಯನ್ನು ಕುಡುಗೋಲಿನಿಂದ ಕೊಲೆಗೈದಿದ್ದ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧಾರವಾಡ ಗ್ರಾಮೀಣ ಸಿಪಿಐ ಪ್ರಶಾಂತ ನಾಯಕ ನೇತೃತ್ವದಲ್ಲಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. […]
ಧಾರವಾಡ: ಯಾರು ವಾಸಿಸದ ಮನೆಗೆ ಕಳ್ಳನೊಬ್ಬ ನುಗ್ಗಿ ಮನೆಯಲ್ಲಿದ್ದ ಸಾಮಗ್ರಿಗಳನ್ನ ಚೆಲ್ಲಾಪಿಲ್ಲಿ ಮಾಡಿ ಏನು ಸಿಗದೆ ಬರಿಗೈಯಲ್ಲಿ ವಾಪಸ್ಸು ಆದ ಘಟನೆ ಧಾರವಾಡದ ಶಿವಪುರ ಕಾಲೋನಿಯಲ್ಲಿ ನಡೆದಿದೆ. ಶಿವಪುರ ಕಾಲೋನಿಯ ನಿವಾಸಿ ರುದ್ರಪ್ಪ ಹೆಬ್ಬಳ್ಳಿ ಎಂಬುವವರ ಮನೆಗೆ ನುಗ್ಗಿದ್ದ ಕಳ್ಳ ಮನೆಯಲ್ಲಿ ಏನು ಸಿಗದೇ ಕೆಲವು ಸಾಮಗ್ರಿಗಳನ್ನು ಗಂಟು ಮೂಟೆ ಕಟ್ಟಿ ಅಲ್ಲಿಯೇ ಬಿಸಾಡಿ ಬರಿಗೈಯಲ್ಲಿ ವಾಪಸ್ ಆಗಿದ್ದಾನೆ. ಬೆಳಗಿನ ಜಾವ ಪಕ್ಕದ ಮನೆಯವರು ಕಳ್ಳತನವಾಗಿರುವ ಮಾಹಿತಿ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಘಟನಾ […]
ಕಾರವಾರ: ವಿದೇಶಿ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ, ಆಕೆಗೆ ಮಗು ಕೊಟ್ಟು ಆನಂತರ ಕಾಣೆಯಾಗಿದ್ದ ಭೂಪನನ್ನು ಬಂಧಿಸುವಲ್ಲಿ ಕೊನೆಗೂ ಉತ್ತರ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಮೂಲದ ಕಿರಣ್ ಎಂಬಾತನೇ ಇಂತಹ ಆರೋಪಕ್ಕೆ ಗುರಿಯಾಗಿರುವ ವ್ಯಕ್ತಿಯಾಗಿದ್ದಾನೆ. ಆತನನ್ನು ಕಾರವಾರ ಪೊಲೀಸರು ವಂಚನೆ ಆರೋಪದಡಿ ಬಂಧಿಸಿದ್ದಾರೆ. ಗೋಕರ್ಣದ ರೆಸಾರ್ಟ್ನಲ್ಲಿ ಕಳೆದ ಎರಡು ವರ್ಷಗಳಿಂದ ನೆಲೆಸಿದ್ದ ರಷ್ಯಾ ಮೂಲದ ಮಹಿಳೆಯ ಪರಿಚಯ ಮಾಡಿಕೊಂಡ ಕಿರಣ್ ಆಕೆಯನ್ನು ವರಿಸುವುದಾಗಿ ಆಮಿಷವೊಡ್ಡಿ ಪ್ರೇಮದ ಬಲೆ ಬೀಳಿಸಿದ್ದ. ಆ ಬಳಿಕ ಆಕೆಯೊಂದಿಗೆ ನಿರಂತರ ಲೈಂಗಿಕ ಸಂಪರ್ಕ […]