ಧಾರವಾಡ : ಧಾರವಾಡದ ಕಲ್ಪತರು ಮಹಿಳಾ ಸಂಘದ ಸಹೋದರಿಯರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ರಕ್ಷಾಬಂಧನ ಆಯೋಜಿಸುವ ಮೂಲಕ ದಿನದ 24 ಗಂಟೆ ರಕ್ಷಣೆ ನೀಡುವ ಪೊಲೀಸ್ ಸಹೋದರರಿಗೆ ಶುಭ ಕೋರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ ಅವರು ತಮ್ಮ ಪೊಲೀಸ್ ಪೇದೆಗಳಿಗೆ ರಕ್ಷಾ ಬಂಧನ ನೀಡುವ ಮೂಲಕ ಇದಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಇದಕ್ಕೆ ಡಿವೈಎಸ್ಪಿ ಡಾ. ಬಿ.ಪಿ.ಚಂದ್ರಶೇಖರ, ಕಲ್ಪತರು ಮಹಿಳಾ ಸಂಘದ ಅಧ್ಯಕ್ಷೆ ಆರತಿ ಪಾಟೀಲ,ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಪಿ.ಐ ಪ್ರಶಾಂತ ನಾಯ್ಕ, ಜಿಲ್ಲಾ ಪೊಲೀಸ್ ಅಪರಾಧ ವಿಭಾಗದ ಸಿ.ಪಿ.ಐ ಎಸ್.ಬಿ. ಮಾಳಗೊಂಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಅಧಿಕಾರಿ ಡಾ. ಎಸ್.ಎಂ.ಹಿರೇಮಠ, ಪೊಲೀಸ್ ಸಬ್ ಇನ್ಸಪೆಕ್ಟರ್ಗಳಾದ ಧಾರವಾಡ ಗ್ರಾಮೀಣ ಠಾಣೆಯ ಆನಂದ ಠಕ್ಕಣ್ಣವರ, ಗರಗ ಠಾಣೆಯ ಐ.ಬಿ.ಮಟ್ಟಮತಿ, ಪಿ.ಜಿ.ಕವಟಗಿ ಮತ್ತು ಮಹಿಳಾ ಪೊಲೀಸ್ ಠಾಣೆಯ ಭಾನು ಎಸ್.ಕುಲಕರ್ಣಿ ಉಪಸ್ಥಿತರಿದ್ದರು.
ಧಾರವಾಡ ಇಲ್ಲಿಯ ಗುಲಗಂಜಿಕೊಪ್ಪದ ಹೊಸ ಓಣಿಯಲ್ಲಿ ಶತಮಾನದ ನಂತರ ನಡೆಯುತ್ತಿರುವ ಮೊಟ್ಟ ಮೊದಲ ಜಾತ್ರಾ ಸಂಭ್ರಮ ಗುರುವಾರ ಮುಗಿಲು ಮುಟ್ಟಿತ್ತು. ಗುಲಗಂಜಿಕೊಪ್ಪದ ಅಧಿದೇವತೆಯರಾದ ದ್ಯಾಮವ್ವ ಹಾಗೂ ದುರಗವ್ವ ದೇವಿ ಜಾತ್ರೆ ಹಿನ್ನಲೆಯಲ್ಲಿ ಬಂಡಾರ ಸೇವೆ ಸಂಭ್ರಮ ಭಕ್ತರ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಬೆಳಗ್ಗೆಯಿಂದಲೇ ಇದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದ ಭಕ್ತ ಸಮೂಹ ಸಂಜೆಯವರೆಗೆ ಉಭಯ ದೇವಿಯರನ್ನು ಹೊತ್ತುಕೊಂಡು ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಭಕ್ತಿ ಭಾವವನ್ನು ಪಸರಿಸುವಲ್ಲಿ ಯಶಸ್ವಿಯಾಯಿತು. ದೇವಿಗೆ ಚೀಲಗಟ್ಟಲೇ ಬಂಡಾರ ಎರಚಿ ಕುಣಿದು ಕುಪ್ಪಳಿಸಿದ ಮಕ್ಕಳು, ಯುವ […]
ನವದೆಹಲಿ : ಹುಬ್ಬಳ್ಳಿಯ ಬಹು ಅಪೇಕ್ಷಿತ ಹಾಗೂ ನಿರೀಕ್ಷಿತ ಸುಸಜ್ಜಿತ ವಿವಿದ್ದೋದೇಶ ಕ್ರೀಡಾ ಸಂಕಿರ್ಣ ಕ್ಕೆ ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಸಂಸದ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಅವರು ಗುರುವಾರ ನವದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವರನ್ನು ಸಂಸತ್ ಆವರಣದಲ್ಲಿ ಭೇಟಿಯಾದಾಗ ಸ್ವತಃ ಸಚಿವ ರಾಜವರ್ಧನ ರಾಥೋಡ ಅವರು ಈ ಸಂತಸದ ಸುದ್ದಿ ತಿಳಿಸಿದ್ದಾರೆ ಎಂದರು. 8 ಕೋಟಿ ರೂ. ಬಿಡುಗಡೆ ಮಾಡಿದ ಕ್ರೀಡಾ ಇಲಾಖೆಯ ಮಂಜೂರಾತಿ ಪತ್ರವನ್ನು ಸಚಿವರು ನೀಡಿದ್ದಾರೆ. ಈ […]
ಧಾರವಾಡ : ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಪ್ರಕಟಿಸುತ್ತಿರುವ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿತರಣೆಯ ಜವಾಬ್ದಾರಿಯನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ವಹಿಸಿದ್ದು, ವಾಯವ್ಯ ಕರ್ನಾಟಕ ಭಾಗದ ೯ ಜಿಲ್ಲೆಗಳ ಸುಮಾರು ೧೨ ಸಾವಿರ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕರು ಬಿಇಓ ಕಚೇರಿಯಿಂದ ಪತ್ರಿಕೆಯನ್ನು ಕೇಳಿ ಪಡೆಯಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೂಚಿಸಿದ್ದಾರೆ. ೨೦೧೫ರ ಫೆಬ್ರುವರಿ ತಿಂಗಳಿನಿಂದಲೇ ಪತ್ರಿಕೆಯ ಬಂಡಲ್ಗಳನ್ನು ನೇರವಾಗಿ ತಾಲೂಕು […]