ಹುಬ್ಬಳ್ಳಿ-ಧಾರವಾಡ : ರೀಯಲ್ ಎಸ್ಟೇಟ್ ದಂಧೆ ಮಾಡುವವರ ತಾಳಕ್ಕೆ ಕುಣಿದು, ಮಧ್ಯಮ ವರ್ಗ ಹಾಗೂ ಬಡ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರದಿಂದ, ಬೇಕಾಬಿಟ್ಟಿಯಾಗಿ ತಯಾರಿಸಿರುವ ಹುಬ್ಬಳ್ಳಿ-ಧಾರವಾಡ ಮಾಸ್ಟರ್ ಪ್ಲಾನ್ ಅನ್ನು ಸರಕಾರ ಅನುಮೋದನೆ ನೀಡಬಾರದು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿರುವ ಮಾಸ್ಟರ್ ಪ್ಲ್ಯಾನ್-2031 ಸಾಕಷ್ಟು ದೋಷಗಳಿಂದ ಕೂಡಿದೆ. 1,300ಕ್ಕೂ ಹೆಚ್ಚಿನ ಆಕ್ಷೇಪಣೆ, ತಕರಾರು, ಸಲಹೆಗಳು ಬಂದ್ದಿದ್ದರೂ ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸದೆ, ತಪ್ಪುಗಳನ್ನು ತಿದ್ದದೇ, ಹೂಡಾದ ಸಭೆಯಲ್ಲಿ ತರಾತುರಿಯಿಂದ ಇದಕ್ಕೆ ಒಪ್ಪಿಗೆ ನೀಡಿ, ಈಗ ಸರಕಾರದ ಅನುಮೋದನೆಗೆ ಕಳುಹಿಸಿರುವುದು ದುರಂತದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರನ್ನು ಕತ್ತಲಲ್ಲಿ ಇಟ್ಟು, ಕೆಲವೇ ಕೆಲವು ರಾಜಕಾರಿಣಿಗಳ, ಬಿಲ್ಡರ್‍ಗಳ, ಶ್ರೀಮಂತರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ರೂಪಿಸಿರುವ ಈ ಯೋಜನೆಯಿಂದ ಅವಳಿ ನಗರಗಳ ಸಮಗ್ರ ಅಭಿವೃದ್ಧಿಗಿಂತ, ಅವಾಂತರಗಳೇ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಮಾಸ್ಟರ್ ಪ್ಲಾನ್ ತಯಾರಿಯಲ್ಲಿ ಅನುಸರಿಸಬೇಕಾದ ಯಾವ ನಿಯಮಗಳನ್ನೂ ಹೂಡಾ ಪಾಲನೆ ಮಾಡಿಲ್ಲ ಎಂದು ಆರೋಪಿಸಿದರು.
ದೋಷಪೂರಿತ ಯೋಜನೆಗೆ ಅನುಮೋದನೆ ದೊರೆತರೆ ದಲಿತರ, ಬಡಕುಟುಂಬಗಳ ಏಕೈಕ ಆಸರೆಯಾಗಿರುವ ಮನೆಗಳು ನೆಲಸಮಗೊಳ್ಳಲಿವೆ. ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧೀನಗೊಂಡು ರೀಯಲ್ ಎಸ್ಟೇಟ್ ಕುಳಗಳ ಪಾಲಾಗಲಿದೆ ಎಂದು ದೂರಿದರು.
ಈ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿರುವುದರ ಹಿಂದೆ ನಡೆದಿರುವ ಭಾರಿ ಲೋಪ, ಅವ್ಯವಹಾರ, ಭೃಷ್ಟಾಚಾರದ ಕುರಿತು ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ದಳದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರ ಈ ಅವೈಜ್ಞಾನಿಕ,ಜನವಿರೋಧಿ ಮಾಸ್ಟರ್ ಪ್ಲಾನ್‍ನ್ನು ಸರ್ಕಾರ ಹಿಂತೆದುಕೊಳ್ಳದೇ ಹೋದರೇ ಅವಳೀ ನಗರಗಳ ನಾಗರಿಕರು ರಾಜೀರಹಿತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ ನಿಯೋಗದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ,ಗಂಗಾಧರ ಬಡಿಗೇರ,ಭುವನಾ.ಎ, ರಮೇಶ ಹೊಸಮನಿ ಹಾಗೂ ಕಿರಣ ಮಳಗಿ,ದೇವಮ್ಮ ದೇವತ್ಕಲ್,ನಿಂಗಮ್ಮ ಹುಡೇದ, ರಾಜೇಸಾಬ್ ಹಿಂಡಸಗೇರಿ, ಸಿಂಧು ಇನ್ನಿತರ ಕಾರ್ಯಕರ್ತರು,ನಾಗರಿಕರು ಇದ್ದರು.
ಧಾರವಾಡ : 2018-19ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಘೋಷಿಸಿರುವ ಹಸಿರು ಕರ್ನಾಟಕ ಯೋಜನೆಯನ್ನು ಆಗಸ್ಟ್ 15 ರಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ದೀಪಾ ತಿಳಿಸಿದರು. ಅವರು ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ, ಹಸಿರು ಕರ್ನಾಟಕ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆಯಾ ಇಲಾಖೆ, ಸಂಸ್ಥೆಗಳ ಮುಖ್ಯಸ್ಥರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಈಗಾಗಲೇ ಅರಣ್ಯ ಇಲಾಖೆಯು ಹಸಿರು ಕರ್ನಾಟಕ ಯೋಜನೆಗೆ ಅಗತ್ಯವಿರುವ ಸಸಿಗಳನ್ನು ಹೊಂದಿದೆ. ಸರ್ಕಾರಿ ಕಚೇರಿ ಹಾಗೂ ಶಾಲಾ, […]
ಧಾರವಾಡ : ಬುಧವಾರ ಜರುಗಿದ 72 ನೇ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ರಾಜ್ಯ ಸರಕಾರದ ಪರವಾಗಿ ಕನ್ನಡದ ಶಕಪುರುಷ ಡೆಪ್ಯೂಟಿ ಚೆನ್ನಬಸಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಡಯಟ್ ಪ್ರಿನ್ಸಿಪಾಲ್ ಸುಮಂಗಳಾ ಕುಚಿನಾಡ, ಉಪಪ್ರಾಚಾರ್ಯ ಜಿ.ಎಂ. ವೃಷಭೇಂದ್ರಯ್ಯ, ಜೀವನ ಶಿಕ್ಷಣ ಮಾಸಪತ್ರಿಕೆಯ ಸಹ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಡಯಟ್ ಉಪನ್ಯಾಸಕರು, ಶಿಕ್ಷಕ-ಶಿಕ್ಷಕಿಯರು, ಲಿಪಿಕ ನೌಕರರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. Share on: […]
ಕಲಬುರಗಿ: ಯೋಗ ಪ್ರಾಣ ವಿದ್ಯಾ ಕೇಂದ್ರ, ಕಲಬುರಗಿ ಮತ್ತು ಗೆಳೆಯರ ಬಳಗ, ಆನಂದ ನಗರ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಜುಲೈ 22ರಂದು ಭಾನುವಾರ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಸಕ್ಕರೆ ಪ್ರಮಾಣ (ಬ್ಲಡ್ ಶುಗರ್) ಮತ್ತು ರಕ್ತಡ ಒತ್ತಡ (ಬಿ.ಪಿ) ಪರೀಕ್ಷಿಸಲಾಗುವದು. ಬೆಳಿಗ್ಗೆ ೧೦.೩೦ ಗಂಟೆಯಿಂದ ಮಧ್ಯಾಹ್ನ ೧.೦೦ ಗಂಟೆಯವರೆಗೆ ಶಿಬಿರ ಆಯೋಜಿಸಲಾಗಿದ್ದು, ಡಾ|| ಮಲ್ಹಾರ ರಾವ ಮಲ್ಲೆ ದವಾಖಾನೆ ಜಗತ್, ಕಲಬುರಗಿಯಲ್ಲಿ ನಡೆಯಲಿದೆ ಎಂದು ಶಿಬಿರದ ಸಂಯೋಜಕ ಡಾ. ಮಲ್ಲಾರ […]