ಅಂತಾರಾಷ್ಟ್ರೀಯ

ಕರೋನಾಗೆ ಮಧ್ಯಪ್ರದೇಶದ ಡಾ. ಶತ್ರುಘನ್ ಸಾವು : ಭಾರತದಲ್ಲಿ ಕರೋನಾಗೆ ಬಲಿಯಾದ ಮೊದಲ ವೈದ್ಯ

ಇಂಧೂರ್ (ಮಧ್ಯಪ್ರದೇಶ) prajakiran.com : ಕರೋನಾ ವೈರಸ್ ವಿರುದ್ಧ ವಿಶ್ವದೆಲ್ಲಡೆ ವೈದ್ಯರು, ದಾದಿಗಳು, ಆಶಾ ಕಾರ್ಯಕರ್ತರು ತಮ್ಮ ಪ್ರಾಣದ ಹಂಗು ತೊರೆದು ಹೋರಾಟ ನಡೆಸುತ್ತಿರುವ ಬೆನ್ನ ಹಿಂದೆಯೇ ಅನೇಕರು ಅದಕ್ಕೆ ಬಲಿಯಾಗಿರುವುದು ಎಲ್ಲರಿಗೂ ತಿಳಿದಿದೆ.

ಇದೀಗ ದೇಶದಲ್ಲಿ ಕೂಡ ಕರೋನಾ ವಿರುದ್ದ ಹೋರಾಟದಲ್ಲಿ ಮಧ್ಯಪ್ರದೇಶದ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ.

ಆ ವೈದ್ಯರನ್ನು ಡಾ. ಶತ್ರುಘನ್ ಪಂಜ್ವಾನಿ ಅವರು ಕರೋನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ಅರವಿಂದೋ ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.

ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘವೂ (ಐಎಂಎ) ಕೂಡ ಖಚಿತಪಡಿಸಿದೆ. ಆ ಮೂಲಕ ಭಾರತದಲ್ಲಿ ಕರೋನಾಗೆ ಬಲಿಯಾದ ಮೊದಲ ವೈದ್ಯರಾಗಿದ್ದಾರೆ.

ಇನ್ನೂ ಇದೇ ವೇಳೆ ಕರ್ನಾಟಕದ ನಾಲ್ವರು ತಬ್ಲಿಘ್ ಜಮಾತ್ ಸಂಘಟನೆಯ ಸದಸ್ಯರು ಕರೋನಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅವರು ದೆಹಲಿಯ ನಿಜಾಮೋದ್ದೀನ್ ಮರ್ಕಜ್ ನ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ಲಾಕ್ ಡೌನ್ ಹಿನ್ನಲೆಯಲ್ಲಿ ಕರ್ನಾಟಕಕ್ಕೆ ಮರಳಿ ಬರಲು ಆಗದೆ ಅಲ್ಲಿಯೇ ಸಿಲುಕಿಕೊಂಡು ಪರದಾಡುತ್ತಿದ್ದಾರೆ.

ಅವರಿಗೆ ಅಲ್ಲಿಯ ನಿಯೋಜಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಧ್ಯಪ್ರದೇಶ ಸರಕಾರ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *