ರಾಜ್ಯ

ಬಿಜೆಪಿ ಭದ್ರ ಕೋಟೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಸಿಎಂ

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ದಲ್ಲಿ ಭಾನುವಾರ ಹಾಲಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿರುಸಿನ ಪ್ರಚಾರ ಮಾಡಿದರು.

ಬಿಜೆಪಿ ಭದ್ರಕೋಟೆಗೆ ಲಗ್ಗೆ ಹಾಕಿದ ಕುಮಾರಸ್ವಾಮಿ ಶಿರಾಳಕೊಪ್ಪದಲ್ಲಿ ಬೃಹತ್ ಸಮಾವೇಶದಲ್ಲಿ ಭಾಷಣ ಮಾಡಿದರು.

ಮಧು ಬಂಗಾರಪ್ಪ ನನ್ನ ಸಹೋದರ ಸಮಾನ, ನನ್ನ ಒತ್ತಾಸೆಗೆ ಮಣಿದು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಹೀಗಾಗಿ ಅವರನ್ನು ಗೆಲ್ಲಿಸಿದರೆ, ಜಿಲ್ಲೆಯ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಬದ್ದ ಎಂದರು.

ಇದೇ ವೇಳೆ ಮಾತನಾಡಿದ ಮಧು ಬಂಗಾರಪ್ಪ, ನಾನು ವಿದೇಶದಿಂದ ಕುಮಾರಣ್ಣನಿಗಾಗಿ ಓಡೋಡಿ ಬಂದೆ. ಅವರ ಸಲಹೆ ಮೇರೆಗೆ ಕಣಕ್ಕೆ ಇಳಿದಿರುವುದಾಗಿ ಹೇಳಿದರು.

ಈ ವೇಳೆ ಮುಖಂಡರಾದ ಎನ್. ಹೆಚ್. ಕೋನರಡ್ಡಿ, ಬಿ.ಎಂ. ಫಾರೂಕ್, ಬಿ.ಸಿ. ಪಾಟೀಲ, ರುದ್ರಪ್ಪ ಲಮಾಣಿ,ಮಂಜುನಾಥ ಗೌಡ, ಬಿ.ಬಿ. ನಿಂಗಯ್ಯ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *