ಸಿನಿಮಾ

ನಿರ್ದೇಶಕ ಗುರುಪ್ರಸಾದಗೆ ಹಿಗ್ಗಾ ಮುಗ್ಗಾ ಊಗಿದ ಹುಚ್ಚ ವೆಂಕಟ್ !

ಬೆಂಗಳೂರು : ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ ನಿನ್ನೇ ನಟಿ ಸಂಜನಾ ಹಾಗೂ ಶೃತಿ ಹರಿಹರನ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ನಟ ಹುಚ್ಚ ವೆಂಕಟ್ ಕಿಡಿ ಕಾರಿದ್ದಾರೆ.

ತಮ್ಮದೇ ಆದ ಕೀಳು ಭಾಷೆಯಲ್ಲಿ ನಟ, ನಿರ್ದೇಶಕ ಗುರುಪ್ರಸಾದಗೆ ಮನಬಂದಂತೆ ತರಾಟೆ ತೆಗೆದುಕೊಂಡಿರುವ ಹುಚ್ಚ ವೆಂಕಟ್ ನನ್ನ ಮಗಂದ್ ಅವರ ಬಳಿ ಬಹಿರಂಗ ಕ್ಷಮೆ ಕೇಳಬೇಕು. ಏನ್ ಹೇಳ್ತಿಯಾ, ಪ್ರತಿವೃತೆ ಅಂತ ಪ್ರೂವ್ ಮಾಡೋಕೋ ಈ ರೀತಿ ಹೇಳಿದ್ದಾರೆ ಅಂತ ಹೇಳ್ತಿಯಾ, ನಿನ್ನ ಮನೆಯಲ್ಲಿ ಅಮ್ಮ ಇಲ್ಲವಾ, ಅಕ್ಕ ತಂಗಿ ಇಲ್ಲವಾ ಅವರಿಗೆ ಹೋಗಿ ಕೇಳು ಅವರು ಅದರ ಮಹತ್ವ ಹೇಳ್ತಾರೆ ಎಂದು ಕಿಡಿ ಕಾರಿದ್ದಾರೆ.

ಅಲ್ಲದೆ, ಸಿನಿಮಾ ಅಂದ್ರೆ ಏನ್ ತಿಳಿದುಕೊಂಡಿದ್ದೀರಾ ಎಂದು ಪ್ರಶ್ನಿಸಿರುವ ಅವರು ಒಂದು ಐಟಂ ಸಾಂಗ್ ಇಡ್ತೀರಾ, ಅರೆ ಬರೆ ಬಟ್ಟೆ ಹಾಕ್ತಿಸ್ತಾರೆ, ಆ ಮೇಲೆ ಅಡಜಸ್ಟ್ ಮಾಡಕೋ ಬೇಕು ಅಂತ ಹೇಳ್ತಿರಾ ನನ್ನ ಮಗಂದ್, ಕೆಲವು ಕಚಡಾ ನನ್ನ ಮಕ್ಕಳಿಂದನೇ ನಮ್ಮ ಸಿನಿಮಾ ಇಂಡ್ರಸ್ಟೀ ಎಕ್ಕಬಿಟ್ಟು ಹೋಗಿದೆ. ನೀನು ಬಿರಿಯಾನಿ ತಿಂದರಬಹುದು, ಆದರೆ ಬೇರೆಯವರ ಮನೆ ಹಾಳು ಮಾಡಿ ಬಿರಿಯಾನಿ ತಿಂದವರು ಯಾವತ್ತು ಉದ್ಧಾರ ಆಗಲ್ಲ ಎಂದೆಲ್ಲಾ ಕಿಚಾಯಿಸಿದ್ದಾರೆ.

ಅನೇಕ ಅವಾಚ್ಯ ಶಬ್ದ ಪದ ಪ್ರಯೋಗ ಮಾಡಿರುವ ಹುಚ್ಚ ವೆಂಕಟ್ ವಿಡೀಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿನಿಮಾರಂಗದ ಕಿತ್ತಾಟ ಇನ್ನಷ್ಟು ಜೋರಾಗುವ ಹಾಗೂ ಪರ ವಿರೋಧ ಟೀಕೆಗೂ ಕಾರಣವಾಗುವ ಸಾಧ್ಯತೆಯಿದೆ.

Please follow and like us:

Leave a Reply

Your email address will not be published. Required fields are marked *