ಸಿನಿಮಾ

ಹೈ ಡ್ರಾಮಾಕ್ಕೆ ಸಾಕ್ಷಿಯಾದ ಗಿರಿನಗರ ಪೊಲೀಸ್ ಠಾಣೆ

ಬೆಂಗಳೂರು : ನಟ ದುನಿಯಾ ವಿಜಿ ಪತ್ನಿಯರಿಬ್ಬರ ನಡುವಿನ ಜಡೆ ಜಗಳದಿಂದಾಗಿ ಗಿರಿನಗರ ಪೊಲೀಸ್ ಠಾಣೆ ದಿನವೀಡಿ ಹೈ ಡ್ರಾಮಾಕ್ಕೆ ಸಾಕ್ಷಿಯಾಯಿತು.
ದುನಿಯಾ ವಿಜಿ ಮಾರುತಿಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದಾಗ ಅವರ ಮನೆಗೆ ಹೋಗಿದ್ದ ಮೊದಲ ಪತ್ನಿ ನಾಗರತ್ನ ಎರಡನೇ ಪತ್ನಿ ಕೀರ್ತಿಗೌಡ ಅವರ ಜಡೆ ಹಿಡಿದು ಎಳೆದಾಡಿದಲ್ಲದೆ, ಚಪ್ಪಲಿಯಿಂದ ಹಲ್ಲೆ ಮಾಡಿ ನಿಂದನೆ ಮಾಡಿದ್ದರು.
ಆಗ ನಡೆದ ಗಲಾಟೆ ವೇಳೆ ದುನಿಯಾ ವಿಜಿ ಮಕ್ಕಳಾದ ಮೋನಿಶಾ ಹಾಗೂ ಮೊನಿಕಾ ಮತ್ತು ಪುತ್ರ ಸಾಮ್ರಾಟ್ ಕೂಡ ಇದ್ದ. ಕೆಲ ಸಂಬಂಧಿಕರು ಸಹ ಈ ವೇಳೆ ಇದ್ದರು. ಯಾರು ಎಷ್ಟೇ ಸಮಜಾಯಿಸಿ ನೀಡಿದರೂ ಕೂಡ ತಣ್ಣಗಾಗದ ನಾಗರತ್ನ ಹಲ್ಲೆ ಮಾಡುತ್ತಲೇ ತನ್ನ ಕಿಡಿ ಕಾರಿದ್ದಳು.
ಈ ಸಂಬಂಧ ನಟ ದುನಿಯಾ ವಿಜಿ ಹಾಗೂ ಕೀರ್ತಿಗೌಡ ಅವರು ಮೊದಲ ಪತ್ನಿ ನಾಗರತ್ನ ವಿರುದ್ದ ದೂರು ದಾಖಲಿಸಿ, ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ದೂರು ಹಾಗೂ ಪ್ರತಿ ದೂರು ದಾಖಲಾಗಿದ್ದು, ಗಿರಿನಗರ ಪೊಲೀಸ್ ಠಾಣೆಗೆ ತೆಲೆ ನೋವು ಆಗಿದ್ದು, ಅವರು ಕೂಡ ಇವರ ವಿರುದ್ದ ಶಾಂತಿಭಂಗ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *