ಸಿನಿಮಾ

ಮಿಲನ ಚಿತ್ರದ ನಾಯಕಿಗೂ ಲೈಂಗಿಕ ಕಿರುಕುಳ !?

ಬೆಂಗಳೂರು : ಮಿಲನ, ಪೃಥ್ವಿ, ಮಳೆ ಬರಲಿ ಮಂಜು ಇರಲಿ ಸೇರಿದಂತೆ ಅನೇಕ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲೂ ಸದ್ದು ಮಾಡಿರುವ ಬಹುಭಾಷಾ ನಾಯಕಿ ಪಾರ್ವತಿಗೆ ಲೈಂಗಿಕ ಕಿರುಕುಳದ ಆತಂಕ ಎದುರಾಗಿತ್ತು.

ಹೌದು ಇದು ಅಚ್ಚರಿಯಾದ್ರೂ ಅದು ಕಹಿ ಸತ್ಯ, ಅದರಿಂದ ಹೊರಬರಲು ನನಗೆ ಹನ್ನೇರಡು ವರ್ಷಗಳೇ ಬೇಕಾಯಿತು ಎಂದು ನಟಿ ಪಾರ್ವತಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಬುಧವಾರ ಮಾಮೀ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಈ ಕರಾಳ ಸತ್ಯವನ್ನು ಬಯಲು ಮಾಡಿದರು. ಮೀ ಟೂ ಅಭಿಯಾನಕ್ಕೆ ಬಾಲಿವುಡ್ ಅಂಗಳದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಆದರೆ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅದಕ್ಕೆ ಅಷ್ಟು ಮಹತ್ವ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅದರಿಂದಾಗುವ ಮಾನಸಿಕ ಹಿಂಸೆ ಸಂತ್ರಸ್ತ್ರರಿಗೆ ಮಾತ್ರ ಗೊತ್ತು. ನಾನೂ ಈ ರೀತಿ ಹೇಳಿದ ತಕ್ಷಣ ಹತ್ತಾರು ಊಹಾಪೋಹ ನನ್ನ ಮೇಲೆಯೇ ಹರಡಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ನಟಿ ಪಾರ್ವತಿ ಅವರ ಈ ಹೇಳಿಕೆ ಮತ್ತೇ ಕನ್ನಡ ಚಿತ್ರರಂಗದಲ್ಲಿ ಭಾರೀ ತಳಮಳ ಸೃಷ್ಟಿಸಿದ್ದು, ಇದು ಇನ್ಯಾವ ತಿರುವು ಪಡೆಯುತ್ತದೆ ಎಂಬುದು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *