ಬೆಂಗಳೂರು : ರಾಜ್ಯದ 105 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳದಿರಲು ಜೆಡಿಎಸ್ ಒಲುವು ತೋರಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ತಿಳಿಸಿದ್ದಾರೆ.
ಭಾನುವಾರ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದ್ದು, ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ. ಕ್ಷೇತ್ರಗಳು ಸಾಕಷ್ಟು ಇರುವುದರಿಂದ ಸ್ಥಾನ ಹೊಂದಾಣಿಕೆ ಬಹಳ ಕಷ್ಟ ಆಗುತ್ತದೆ ಎಂದರು.
ಅದೇ ರೀತಿ ಸಮ್ಮಿಶ್ರ ಸರಕಾರಕ್ಕೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಮೈತ್ರಿ ಮಾಡಿಕೊಂಡರೆ ಕಷ್ಟ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಕೂಡ ನನ್ನ ಬಳಿ ಅಳಲು ತೊಡಿಕೊಂಡಿದ್ದಾರೆ. ಅದಕ್ಕೆ ನಮ್ಮದು ಸಹಮತವಿದೆ. ಹೀಗಾಗಿ ಯಾವುದೇ ಪರಸ್ಪರ ತಿಕ್ಕಾಟವಿಲ್ಲದೆ, ಚುನಾವಣೆ ಸೌಮ್ಯವಾಗಿ ನಡೆಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಅಗತ್ಯ ಬಿದ್ದರೆ ಮೈತ್ರಿ ಮಾಡಿಕೊಳ್ಳಲು ಸ್ಥಳೀಯ ನಾಯಕರಿಗೆ ಅವಕಾಶ ನೀಡಲಾಗಿದೆ. ಅವರು ಬೇಕಿದ್ದರೆ ಹೊಂದಾಣಿಕೆ ಮಾಡಿಕೊಳ್ಳಲಿ. ನಾವಂತೂ ಸದ್ಯಕ್ಕೆ ಮೈತ್ರಿಯಿಂದ ದೂರ ಇರಲಿದ್ದೇವೆ ಎಂದರು.
ಆ ಮೂಲಕ ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ಜೆಡಿಎಸ್ ಮುಖಂಡರ ಮತ್ತು ಕಾರ್ಯಕರ್ತರ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಮಡಿಕೇರಿ : ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಹೆಮ್ಮತಾಳು ಪ್ರದೇಶದಲ್ಲಿ ಮನೆ ಮಾಲೀಕರು ನಾಪತ್ತೆಯಾದ ಹಿನ್ನಲೆಯಲ್ಲಿ ಸಾಕು ಪ್ರಾಣಿಯ ಮೋಕ ರೋದನ ನೋಡುಗರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಹೆಮ್ಮತ್ತಾಳು ಪ್ರದೇಶದಲ್ಲಿದ್ದ ಮನೆಯೊಂದರಲ್ಲಿ ವಾಸವಾಗಿದ್ದ ಲೀಲಾವತಿ, ಉಮೇಶ್ ದಂಪತಿ ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದಾರೆ. ಹೀಗಾಗಿ ಆ ಮನೆಯಲ್ಲಿದ್ದ ಸಾಕು ಪ್ರಾಣಿ ಮನೆ ಮಾಲೀಕರಿಗಾಗಿ ಕಣ್ಣೀರು ಹಾಕುತ್ತಿದೆ. ನಾಯಿಯ ಮೂಕರೋದನ ಕಂಡು ಸ್ಥಳೀಯರು ಮಮ್ಮಲ ಮರಗುತ್ತಿದ್ದಾರೆ. ದಂಪತಿ ನಾಪತ್ತೆಯಾಗಿದ್ದರಿಂದ ಅವರ ಶೋಧ ಕಾರ್ಯ ಮುಂದುವರೆದಿದೆ. Share on: […]
ಸೀತಾಪುರ : ರೈತರೊಂದಿಗೆ ನಾವಿದ್ದೇನೆ ಎಂದು ಆತ್ಮಸ್ಥೈರ್ಯ ತುಂಬುವ ಸದುದ್ದೇಶದಿಂದ ಇಂದು ಸ್ವತಃ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತನ ಗದ್ದೆಗೆ ಇಳಿದು ಭತ್ತ ನಾಟಿ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಶನಿವಾರ ಕೆಲ ಕಾಲ ಸ್ವತಃ ಮಣ್ಣಿನ ಮಗನಾಗುವ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವಿಶೇಷ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಐದು ಎಕರೆ ಜಮೀನಿನಲ್ಲಿ ಕುಮಾರಸ್ವಾಮಿ ಅವರ ಭತ್ತ ನಾಟಿ ಕಾರ್ಯಕ್ಕೆ 50 ಗಂಡಾಳು, 105 ಹೆಣ್ಣಾಳು, ಜಮೀನು ಮಾಲೀಕ ದೇವರಾಜ್ ಸೇರಿದಂತೆ […]
ಹುಬ್ಬಳ್ಳಿ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪೊಲೀಸರು ಹುಬ್ಬಳ್ಳಿಯಲ್ಲಿ ವಿಚಾರಣೆ ಮುಂದುವರಿಸಿದ್ದಾರೆ. ಬಂಧಿತ ಆರೋಪಿ ಗಣೇಶ ಮಿಸ್ಕಿನ್ ಕುಟುಂಬಸ್ಥರ ವಿಚಾರಣೆ ನಡೆಸಿರುವ ಪೊಲೀಸರು ಗಣೇಶನ ಅಣ್ಣ ರವಿ ಮಿಸ್ಕಿನ್ ವಶಕ್ಕೆ ಪಡೆಯಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಎಸ್ಐಟಿ ಪೊಲೀಸರ ಕಣ್ತಪ್ಪಿಸಿ ರವಿ ಮಿಸ್ಕಿನ್ ಪರಾರಿಯಾಗಿದ್ದಾರೆ. ಇದರಿಂದಾಗಿ ಆಘಾತಕ್ಕೀಡಾಗಿ ಕುಸಿದು ಬಿದ್ದ ಗಣೇಶ ತಾಯಿ ಪುಷ್ಪಾ ಮಿಸ್ಕಿನ್ ಅವರನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಹಲವು […]