ಲಕ್ನೋ : ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ಸಾಕಷ್ಟು ಜನಪರ ಕೆಲಸ ಮಾಡ್ತಾಯಿದೆ. ಆದರೆ ಅದನ್ನು ಸಹಿಸಲು ಆಗದ ಕಾಂಗ್ರೆಸ್ ಪಕ್ಷವೂ ಪ್ರಾದೇಶಿಕ ಪಕ್ಷಗಳ ಜೊತೆಗೆ ಸೇರಿ ಪಿತೂರಿ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಪಕ್ಷಗಳ ವಿರುದ್ದ ಗುಡುಗು ಹಾಕಿದ್ದಾರೆ.
ಅವರು ಬಿಜೆಪಿಯ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಇಲ್ಲಿ ಮಾಫೀಯಾ, ಗೂಂಡಾಗಿರಿ ಬಹಳಷ್ಟು ಇಟ್ಟು. ಇದೀಗ ಯೋಗಿ ಸರಕಾರ ಅದಕ್ಕೆ ಮಟ್ಟ ಹಾಕಿದೆ. ಅವರೆಲ್ಲ ಈಗ ಉತ್ತರ ಪ್ರದೇಶ ಬಿಟ್ಟು ಹೋಗಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ರಾಜ್ಯದ ಪರಿಸ್ಥಿತಿಯನ್ನೇ ಹಾಳು ಮಾಡಿದ್ದರು ಎಂದು ಟೀಕಿಸಿದರು.
ಕಾಂಗ್ರೆಸ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಉತ್ತರಪ್ರದೇಶಕ್ಕೆ ಎಷ್ಟು ಹಣ ಕೊಡಲಾಗಿದೆ ಎಂಬುದನ್ನು ಹೇಳಲಿ ಎಂದು ಸವಾಲ್ ಹಾಕಿದರು.
