ಧಾರವಾಡ: ದೇಶದಲ್ಲಿ ಒಂದೇ ಸಮಯಕ್ಕೆ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆ ನಡೆಸುವುದರಿಂದ ಅನೇಕ ಲಾಭಗಳಿವೆ. ವಿಶೇಷವಾಗಿ ಆರ್ಥಿಕ ಮಿತವ್ಯಯ ಸಾಧಿಸಬಹುದಾಗಿದೆ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಈಶ್ವರ್ ಭಟ್ ಹೇಳಿದರು.
ಅವರು ಭಾನುವಾರ ನಗರದ ಆಲೂರ ವೆಂಕಟರಾವ್ ಭವನದಲ್ಲಿ ಯೋಗಕ್ಷೇಮ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣಿಗಳನ್ನು ನಡೆಸುವ ಸಾಧಕ-ಭಾದಕಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
೧೯೯೯ರಲ್ಲಿ ರಚನೆಯಾದ ನ್ಯಾಯಮೂರ್ತಿ.ಬಿ.ವಿ. ಜೀವನರಡ್ಡಿ ಅಧ್ಯಕ್ಷತೆಯಲ್ಲಿ ಸರಕಾರಕ್ಕೆ ಸಲ್ಲಿಸಿದ ವರದಿ ಒಂದರಲ್ಲಿ ಲೋಕ ಸಭೆ ಮತ್ತು ವಿದಾನ ಸಭೆ ಚುನಾವಣೆಯನ್ನು ಒಂದೇ ಕಾಲದಲ್ಲಿ ನಡೆಸುವುದು ಸೂಕ್ತ ಎಂದಿದೆ. ಇದರಿಂದ ಸಾಕಷ್ಟು ಕರ್ಚು ಉಳಿವುದಲ್ಲದೆ ಸಾಮಾಜಿಕ, ಶೈಕ್ಷಣಿಕ ಮಾನವ ಸಂಪತ್ತಿ ಉಳಿತಾಯವಾಗಲಿದೆ. ಗ್ರಾ.ಪಂ, ಜಿ.ಪಂ., ವಿಧಾನ ಸಭೆ, ಲೋಕ ಸಭೆ ಚುನಾವಣೆಗಳು ಒಂದೊಂದು ಸಮಯದಲ್ಲಿ ಒಂದೊಂದು ನಡೆಯುವುದರಿಂದ ಅಭಿವೃದ್ಧಿ ಕುಂಠಿತ ವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ನಿವೃತ್ತ ನ್ಯಾಯಾಧೀಶ ಸಂಗಪ್ಪ ಮಿತ್ತಲಕೋಡ್ ಉಪಸ್ಥಿತರಿದ್ದರು.
ಧಾರವಾಡ : ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಅಭಿಯಾನ ಯೋಜನೆ ಅಡಿ ವೈದ್ಯಕೀಯ ಮೌಲ್ಯಾಂಕನ ಶಿಬಿರದಲ್ಲಿ ಪಾಲ್ಗೊಂಡಿದ್ದ ದಿವ್ಯಾಂಗ ಮಕ್ಕಳಿಗೆ ವೈದ್ಯರು ಶಿಫಾರಸ್ಸು ಮಾಡಿದ ಸಾಧನ ಸಲಕರಣೆಗಳನ್ನು ಶಹರ ವಲಯದ ಬಿ.ಇ.ಓ. ಕಚೇರಿ ಆವರಣದಲ್ಲಿ ವಿತರಿಸಲಾಯಿತು. ಒಟ್ಟು 76 ದಿವ್ಯಾಂಗ ಮಕ್ಕಳಿಗೆ 4-ಎಚ್.ಬಿ. ಬೆಡ್, ಎಲ್.ಡಿ. ಕಿಟ್ ಸೇರಿದಂತೆ ವಿವಿಧ ಮಾನ್ಯತೆವಾರು 119 ಅವಶ್ಯಕ ಸಾಧನ ಸಾಮಗ್ರಿಗಳನ್ನು ವಿತರಿಸಲಾಯಿತು. ಶಿಕ್ಷಣ ಸಂಯೋಜಕಿ ಶಕುಂತಲಾ ಗಡೆಂಕನಹಳ್ಳಿ ಸಲಕರಣೆಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ದಿವ್ಯಾಂಗ ಮಕ್ಕಳಲ್ಲಿ ಚೈತನ್ಯ ತುಂಬಲು, […]
ಧಾರವಾಡ : ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಅಕಾಲಿಕ ನಿಧನಕ್ಕೆ ಮುಸ್ಲಿಂ ಸಮಾಜದ ವತಿಯಿಂದ ಹಾಗೂ ಟಿಪ್ಪು ಸುಲ್ತಾನ್ ಯುವಕ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗುರುವಾರ ರಾತ್ರಿ ಇಲ್ಲಿಯ ಹಜರತ್ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಅವರ ನೇತೃತ್ವದಲ್ಲಿ ಜಮಾಯಿಸಿದ ಮುಸ್ಲಿಂ ಸಮಾಜದ ನೂರಾರು ಯುವಕರು ಹಾಗೂ ಟಿಪ್ಪು ಸುಲ್ತಾನ್ ಯುವಕ ಸಂಘದ ಪದಾಧಿಕಾರಿಗಳು ವಾಜಪೇಯಿ ಅಮರ್ ರಹೇ ಎಂದು ಘೋಷಣೆ ಮೊಳಗಿಸಿ, ಗೌರವ ನಮನ […]
ಧಾರವಾಡ : ಶಿಕ್ಷಣ ಇಲಾಖೆಯ ವತಿಯಿಂದ ಈ ಬಾರಿಯ 72ನೇ ಸ್ವಾತಂತ್ರ್ಯ ದಿನವನ್ನು ‘ಹಸಿರು ಸ್ವಾತಂತ್ರ್ಯೋತ್ಸವ’ವಾಗಿ ಆಚರಿಸಲಾಯಿತು. ನಗರದ ಅಪರ ಆಯುಕ್ತರ ಕಚೇರಿಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಆ ಗಿಡಗಳಿಗೆ ‘ಹಸಿರು ಸ್ವಾತಂತ್ರ್ಯೋತ್ಸವದ ನೆನಪು’ ಎಂಬ ಫಲಕವನ್ನು ಅಳವಡಿಸಿದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಈ ಜನಪರ ಕೈಂಕರ್ಯಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಸಿಸ್ಲೆಪ್ ನಿರ್ದೇಶಕ ಬಿ.ಎಸ್. ರಘುವೀರ, ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್, ಉಪನಿರ್ದೇಶಕ ಮೃತ್ಯುಂಜಯ ಕುಂದಗೋಳ, ಉಮೇಶ ಬೊಮ್ಮಕ್ಕನವರ, ಅರ್ಜುನ ಕಂಬೋಗಿ, […]