ಧಾರವಾಡ : ಮನುಷ್ಯನ ಮನಸ್ಸು ಹತೋಟಿಯಲ್ಲಿದ್ದರೆ ಆತ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ ಮತ್ತು ಅವನು ಎಂತಹ ಕಠಿಣ ಕೆಲಸವಾದರೂ ಸಾಧಿಸಬಹುದು ಎಂದು ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರು ಹೇಳಿದರು.
ಅವರು ಭಾನುವಾರ ಹೊಸ ಯಲ್ಲಾಪುರದ ಬಸದಿಯಲ್ಲಿ ಚಾತುರ್ಮಾಸ ನಿಮಿತ್ತ ತಮ್ಮ ಪ್ರವಚನದಲ್ಲಿ ಆರ್ಶೀವಚನ ಹೇಳಿದರು,
ನಾನು ಎನ್ನುವುದನ್ನು ಬಿಡಬೇಕು ಮತ್ತು ವಿವೇಕ ಶುದ್ಧ ವಾಗಿರಬೇಕು . ಎಲ್ಲದಕ್ಕೂ ನಾವು ಕೀಲಿ ಹಾಕಿ ಹತೋಟಿಯಲ್ಲಿಟ್ಟಕೊಳ್ಳಬಹುದು ಆದರೆ ಮನಸ್ಸನ್ನಲ್ಲ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದರೆ ಶುದ್ಧ ಮಾತು ಮತ್ತು ವಿವೇಕದಿಂದ ಕೂಡಿದ ಯೋಚನೆಗಳಿಂದ ಮಾತ್ರ ಸಾಧ್ಯ ಎಂದರು.
ನೀರನ್ನು ಸೋಸಿ ಕುಡಿಯಬೇಕು ಅದೇ ರೀತಿಯಾಗಿ ಮಾತನ್ನು ಯೋಚನೆ ಮಾಡಿ ಮಾತನಾಡಬೇಕು . ಪ್ರೀತಿ ಪ್ರೇಮ ವಾತ್ಸಲ್ಯಭರಿತ ಜೀವನ ನಿಮ್ಮದಾಗಬೇಕು .ಅದು ಸಿಹಿಯಾದ ಮಾತು ಮತ್ತು ಭಾಷಾ ಸಂಹಿತೆಯಿಂದ ಬರುತ್ತದೆ ಎಂದು ಹೇಳಿದರು. ಎಲ್ಲ ಶ್ರಾವಕ ಶ್ರಾವಿಕೆಯರು ಉಪಸ್ಥಿತರಿದ್ದರು.
ಧಾರವಾಡ/ಗದಗ/ಹಾವೇರಿ : ಉತ್ತರ ಕರ್ನಾಟಕ ಭಾಗದ ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಜುಲೈ 21ರಂದು ರೈತ ಹುತಾತ್ಮ ದಿನಾಚರಣೆ ಆಚರಿಸುತ್ತಿರುವ ಹಿನ್ನಲೆಯಲ್ಲಿ ಈ ಮೂರು ದಿನಗಳಲ್ಲಿ ಒಂದು ದಿನ ಮದ್ಯ ಮಾರಾಟ ನಿಷೇಧ ಹೇರಿ ಆಯಾ ಜಿಲ್ಲಾಡಳಿತಗಳು ಆದೇಶಹೊರಡಿಸಿವೆ. ರೈತ ಬಂಡಾಯದ ನೆಲವಾದ ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯ ರೈತರು ಜಮಾಯಿಸಿ ಜುಲೈ ೨೧ ರಂದು ರೈತ ಹುತಾತ್ಮ ದಿನಾಚರಣೆ ಕೈಗೊಳ್ಳಲಿದ್ದಾರೆ. ಅಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು, […]
ಧಾರವಾಡ : ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಪ್ರಕಟಿಸುತ್ತಿರುವ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿತರಣೆಯ ಜವಾಬ್ದಾರಿಯನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ವಹಿಸಿದ್ದು, ವಾಯವ್ಯ ಕರ್ನಾಟಕ ಭಾಗದ ೯ ಜಿಲ್ಲೆಗಳ ಸುಮಾರು ೧೨ ಸಾವಿರ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕರು ಬಿಇಓ ಕಚೇರಿಯಿಂದ ಪತ್ರಿಕೆಯನ್ನು ಕೇಳಿ ಪಡೆಯಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೂಚಿಸಿದ್ದಾರೆ. ೨೦೧೫ರ ಫೆಬ್ರುವರಿ ತಿಂಗಳಿನಿಂದಲೇ ಪತ್ರಿಕೆಯ ಬಂಡಲ್ಗಳನ್ನು ನೇರವಾಗಿ ತಾಲೂಕು […]
ಧಾರವಾಡ : ಭಾರತದ ಸಂವಿಧಾನವನ್ನು ಸುಟ್ಟು ಡಾ. ಅಂಬೇಡ್ಕರ್ರವರಿಗೆ ಅವಮಾನ ಮಾಡಿದ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಕೃತಿ ಸುಟ್ಟು ಚಪ್ಪಲಿ ಸೇವೆ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದರು. ಅಲ್ಲದೆ. ಅಂತಹ ಉದ್ಧಟತನ ಮೆರೆದ ಜಾತಿವಾದಿ ರಾಷ್ಟ್ರದ್ರೋಹಿಗಳ ಮೇಲೆ ಐ.ಪಿ.ಸಿ. ಸೆಕ್ಷನ್ 153(ಎ) ಮತ್ತು ಸೆಕ್ಷನ್ 505ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಅತ್ಯಂತ ಕಠಿಣ ಶಿಕ್ಷೆಗೆ […]