ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಬಿಜೆಪಿ ಸಂಸದರಿಗೆ ಖಡಕ್ ಸೂಚನೆಯೊಂದನ್ನು ನೀಡಿದ್ದಾರೆ. ಅರೇ ಅದೇನಪ್ಪ ಅಂತಿರಾ. ಹೌದು ಇಂತಹ ಒಂದು ಸೂಚನೆ ಪ್ರಧಾನಮಂತ್ರಿಯವರಿಂದ ಹೊರಬಿದ್ದಿದ್ದು, ತಕ್ಷಣ ರಾಜ್ಯದ ಪ್ರವಾಹ ಪೀಡಿತ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಶೀಘ್ರದಲ್ಲೇ ಸಮಗ್ರ ವರದಿ ಸಲ್ಲಿಸಬೇಕೆಂದು ಹೇಳಿದ್ದಾರೆ. ಈ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ, […]
ನವದೆಹಲಿ : ನೆರೆ ಹಾವಳಿಯಿಂದ ನಲುಗಿ ಹೋಗಿರುವ ಕೇರಳ ಹಾಗೂ ಕರ್ನಾಟಕಕ್ಕೆ ಈಗಾಗಲೇ 50 ಲಕ್ಷ ರೂ ಮೌಲ್ಯದ ಅಗತ್ಯ ಸಾಮಾಗ್ರಿ ಕಳುಹಿಸಲಾಗಿದೆ ಎಂದು ಯೋಗ ಗುರು ಬಾಬಾ ರಾಮದೇವ್ ತಿಳಿಸಿದ್ದಾರೆ. ಅವರು ಸೋಮವಾರ ಎ ಎನ್ ಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಮಾಹಿತಿ ನೀಡಿದ್ದಾರೆ. ಮತ್ತೇ ಇದೀಗ 1.5 ಕೋಟಿ ಮೌಲ್ಯದ ವಿವಿಧ ಸಾಮಾಗ್ರಿಗಳನ್ನು ಕಳುಹಿಸಲಾಗುವುದು. ಅಗತ್ಯ ಬಿದ್ದರೆ ಮತ್ತಷ್ಟು ನೆರವು ನೀಡಲಾಗುವುದು ಎಂದ ಅವರು ಸಂಕಷ್ಟದಲ್ಲಿರುವ ಜನರ ರಕ್ಷಣಾ ಕಾರ್ಯದಲ್ಲಿ ನಿರತವಾಗಿರುವ […]
ನವದೆಹಲಿ : ದೇಶದ ಎಲ್ಲ ಜನರಿಗೆ ಮನೆ, ನೀರು, ವಿದ್ಯುತ್ ಇದು ನಮ್ಮ ಸಂಕಲ್ಪವಾಗಿದ್ದು, ನಾವು ಯಾವುದೇ ಭೇದ ಭಾವ ಮಾಡಿಲ್ಲ. ಎಲ್ಲ ಮನೆ ಮನೆಗಳಿಗೆ ಶೌಚಾಲಯ, ಎಲ್ಲರಿಗೂ ಸುರಕ್ಷತೆ, ಎಲ್ಲರಿಗೂ ವಿಮೆ, ಎಲ್ಲರಿಗೂ ಆರೋಗ್ಯ ಹೀಗೆ ಎಲ್ಲ ಮೂಲ ಸವಲತ್ತು ದೊರೆಯಬೇಕಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಅವರು ನವದೆಹಲಿಯ ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು. ದೇಶದ ಎಲ್ಲ ನಾಗರಿಕರಿಗೆ ಕ್ವಾಲಿಟಿ ಲೈಫ್ ಸಿಗಬೇಕು, ಎಲ್ಲರಿಗೂ ಉದ್ಯೋಗ ಸಿಗಬೇಕು […]