ಲಂಡನ್ : ಉದ್ಯಮಿ ವಿಜಯ ಮಲ್ಯನನ್ನು ಭಾರತಕ್ಕೆ ಹಸ್ತಾಂತರ ಕುರಿತಂತೆ ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಿತು.
ಸಿಬಿಐ ಅಧಿಕಾರಿಗಳು ಅವರನ್ನು ಮುಂಬೈನ ಅರ್ಥರ್ ರೋಡ್ ಜೈಲ್ ನ ಸೆಲ್ ನಂ 12ರಲ್ಲಿ ಇರಿಸಲಾಗುವುದು. ಅವರಿಗೆ ಅಗತ್ಯ ಸೌಲಭ್ಯ ಹಾಗೂ ಭದ್ರತೆ ಒದಗಿಸಲಾಗುವುದು ಎಂದು ನ್ಯಾಯಾಲಯಕ್ಕೆ ಕೆಲ ಛಾಯಾಚಿತ್ರಗಳ ಸಾಕ್ಷ್ಯ ಒದಗಿಸಲಾಗಿತ್ತು.
ಇದನ್ನು ನಿರಾಕರಿಸಿದ ವಿಜಯಮಲ್ಯ ವಕೀಲರು ಅದರ ಕುರಿತು ಸೂಕ್ತ ವಿಡಿಯೋ ಚಿತ್ರಣ ನೀಡುವಂತೆ ಮನವಿ ಮಾಡಿದರು. ಹೀಗಾಗಿ ನ್ಯಾಯಾಲಯ ವಿಡಿಯೋ ತುಣುಕು ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿದೆ.
ಈ ವೇಳೆ ನ್ಯಾಯಾಲಯದಲ್ಲಿ ಭಾರತದ ಕೆಲ ಸಿಬಿಐ ಅಧಿಕಾರಿಗಳು ಕೂಡ ಹಾಜರಿದ್ದರು.
ಬೆಂಗಳೂರು : ಕಳೇದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್ ಶೋ ಈ ಬಾರಿ ಲಕ್ನೋ ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. 2006ರಿಂದ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿದ್ದ ಈ ಏರ್ ಶೋ ಈವರೆಗೆ 12 ಬಾರಿ ಬೆಂಗಳೂರಿನಲ್ಲಿ ನಡೆದಿದೆ ಇದರಿಂದಾಗಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿತ್ತು. ಅಲ್ಲದೆ, ಈ ಏರ್ ಶೋ ನೋಡಲು ದೇಶ-ವಿದೇಶದಿಂದ ಕೂಡ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಈ ಬಾರಿ ಅದನ್ನು ಲಕ್ನೋಗೆ ಶಿಫ್ಟ್ ರಕ್ಷಣಾ ಇಲಾಖೆ […]
ಪಾಕಿಸ್ತಾನ: ಪಾಕ್ ನಟಿ ಹಾಗೂ ಖ್ಯಾತ ಹಿನ್ನಲೆ ಗಾಯಕಿ ಆಗಿದ್ದ ರೇಷ್ಮಾ ತನ್ನ ಪತಿಯ ಗುಂಡೇಟಿಗೆ ಬಲಿಯಾಗಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ನೌಶೇರಾ ಕಲಾನ್ ಎಂಬಲ್ಲಿಫೈದಾ ಖಾನ್ ಎಂಬಾತನೇ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಈತನಿಗೆ ಮೃತ ರೇಷ್ಮಾ ನಾಲ್ಕನೇ ಹೆಂಡತಿಯಾಗಿದ್ದಳು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದ ದೂರವಾಗಿದ್ದ ನಟಿ ರೇಷ್ಮಾ ತನ್ನ ಸಹೋದರನ ಜೊತೆಗೆ ಬೇರೆ ಕಡೆ ವಾಸವಾಗಿದ್ದರು. ಕಳೆದ ಹಲವು ವರ್ಷಗಳಿಂದ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಫೈದಾ ಖಾನ್ ಪಾಕಿಸ್ತಾನಕ್ಕೆ ಆಗಮಿಸಿದಾಗ ತನ್ನ […]
ಇಂಡ್ಯೋನೇಷ್ಯಾ : ಇಂಡ್ಯೋನೇಷ್ಯಾದ ಬಾಲಿ ಸಮೀಪದ ಗಿಲಿ ದ್ವೀಪದ ಲೊಂಬ್ಯಾಕ್ ನಲ್ಲಿ ಬೆಳಗಿನ ಜಾವ ಭಾರಿ ಭೂಕಂಪ ಸಂಭವಿಸಿದೆ. ಈ ಭೂಕಂಪನಕ್ಕೆ ನೂರಾರು ಜನರು ಸಾವನ್ನಪ್ಪಿದ್ದು, ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. 6.9 ಮ್ಯಾಗ್ನಿಟುಡ್ ಕಂಪನಕ್ಕೆ ಭೂ ತತ್ತರಿಸಿದ್ದು, ಈ ಹಿಂದೆ ಕೂಡ ಇಲ್ಲಿ ನಿರಂತರವಾಗಿ ಭೂಕಂಪನವಾಗುತ್ತಲೇ ಇದೆ. ಈವರೆಗೆ 259 ಜನ ಸಾವನ್ನಪ್ಪಿದ್ದಾರೆ. 1053 ಜನ ಗಾಯಗೊಂಡಿದ್ದಾರೆ. 2 ಲಕ್ಷ 70 ಸಾವಿರಕ್ಕೂ ಅಧೀಕ ಜನ ಮನೆ ಕಳೆದುಕೊಂಡಿದ್ದಾರೆ. ಕಳೆದ ಆಗಸ್ಟ್ 5ರಂದು ಸಂಭವಿಸಿದ್ದ ಭೂಕಂಪನದಲ್ಲಿ […]