ಧಾರವಾಡ : ಇಲ್ಲಿಯ ಗುಲಗಂಜಿಕೊಪ್ಪದ ಹೊಸ ಓಣಿಯ ದ್ಯಾಮ್ಮವ್ವ ಹಾಗೂ ದುರಗಮ್ಮ ದೇವಿಯ ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ವಿದ್ಯುಕ್ತ ತೆರೆ ಬಿದ್ದಿದೆ.
ಇತಿಹಾಸ ಪ್ರಸಿದ್ಧ ಉಭಯ ದೇವಿಯರ ಜಾತ್ರೆಯೂ ಶತಮಾನಗಳ ನಂತರ ನಡೆಯುತ್ತಿರುವುದಕ್ಕೆ ಭಕ್ತ ಸಮೂಹಕ್ಕೆ ಎಲ್ಲಿಲ್ಲದ ಭಕ್ತಿ, ಭಾವ, ಶ್ರದ್ಧೆ, ಸಡಗರ ಸಂಭ್ರಮ ತಂದಿತ್ತು.
ಐದು ದಿನಗಳ ಕಾಲ ಮನೆಯ ಮಂದಿಯೆಲ್ಲ ದೇವಿಯ ಸನ್ನಿಧಿಯಲ್ಲೇ ಕಾಲ ಕಳೆದು, ಆಕೆಯ ಸೇವೆ ಮಾಡಿ ಕೃತಾರ್ಥರಾದರು.
ಜಾತ್ರೆಯ ಕೊನೆಯ ದಿನದ ಅಂಗವಾಗಿ ದೇವಿಯ ಪಲ್ಲಕ್ಕಿ ಉತ್ಸವ ನಡೆಯಿತು. ಪಲ್ಲಕ್ಕಿಯೂ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು. ಪಲ್ಲಕ್ಕಿಯ ಹಿಂದೆ ಸಾವಿರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಹೆಜ್ಜೆ ಹಾಕಿದ್ದು, ಎಲ್ಲರ ಗಮನ ಸೆಳೆಯಿತು.
ದ್ಯಾಮ್ಮವ್ವ ಹಾಗೂ ದುರಗಮ್ಮ ದೇವಿಯ ಭಕ್ತ ಸಮೂಹ ಕಂಡು ಜನತೆ ಕೂಡ ಪಾವನವಾಯಿತು. ಬಳಿಕ ಸಹಸ್ರಾರು ಭಕ್ತರು ದೇವಿಯ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.